ತಂತ್ರಜ್ಞಾನ ಕಂಪನಿಗಳು ಡಿಜಿಟಲ್ ಸುದ್ದಿ ಪೋರ್ಟಲ್‌ಗಳಿಗೆ ಆದಾಯ ಹಂಚಬೇಕು: ಕೇಂದ್ರ ಒತ್ತಾಯ

ಗೂಗಲ್, ಫೇಸ್ ಬುಕ್ ನಂತಹ ಟೆಕ್ ದೈತ್ಯ ಸಂಸ್ಥೆಗಳು ತಮ್ಮ ಸಂಸ್ಛೆಯ ಆದಾಯವನ್ನು ಡಿಜಿಟಲ್‌ ಸುದ್ದಿ ಪ್ರಕಾಶಕರೊಂದಿಗೆ ಹಂಚಿಕೊಳ್ಳಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು  ಒತ್ತಾಯಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಗೂಗಲ್, ಫೇಸ್ ಬುಕ್ ನಂತಹ ಟೆಕ್ ದೈತ್ಯ ಸಂಸ್ಥೆಗಳು ತಮ್ಮ ಸಂಸ್ಛೆಯ ಆದಾಯವನ್ನು ಡಿಜಿಟಲ್‌ ಸುದ್ದಿ ಪ್ರಕಾಶಕರೊಂದಿಗೆ ಹಂಚಿಕೊಳ್ಳಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು  ಒತ್ತಾಯಿಸಿದ್ದಾರೆ.

ಡಿಜಿಟಲ್‌ ಸುದ್ದಿ ಪ್ರಕಾಶಕರ ಸಂಘಕ್ಕೆ (ಡಿಎನ್‌ಪಿಎ) ರವಾನಿಸಿರುವ ಸಂದೇಶದಲ್ಲಿ ಮಾತನಾಡಿರುವ ಅವರು, ‘ಗೂಗಲ್, ಫೇಸ್‌ಬುಕ್‌ನಂತಹ ದೈತ್ಯ ತಂತ್ರಜ್ಞಾನ ಕಂಪನಿಗಳು ತಮ್ಮ ಆದಾಯವನ್ನು ಡಿಜಿಟಲ್‌ ಸುದ್ದಿ ಪ್ರಕಾಶಕರೊಂದಿಗೆ ಹಂಚಿಕೊಳ್ಳಬೇಕು..ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್‌ ಮತ್ತು ಯುರೋಪಿಯನ್‌ ಒಕ್ಕೂಟ ಈ ಸಂಬಂಧ ಶಾಸಕಾಂಗದ ಮೂಲಕ ಈಗಾಗಲೇ ಉಪಕ್ರಮ ಕೈಗೊಂಡಿವೆ. ವಿಷಯ ಮತ್ತು ವಸ್ತು ಸೃಷ್ಟಿಸುವ ಪ್ರಕಾಶಕರು ಹಾಗೂ ತಂತ್ರಜ್ಞಾನ ಕಂಪನಿಗಳ ನಡುವೆ ಆದಾಯದ ನ್ಯಾಯಯೋಚಿತ ವಿಭಜನೆಯನ್ನು ಖಾತರಿಪಡಿಸಿಕೊಳ್ಳುವುದಕ್ಕಾಗಿ ಸ್ಪರ್ಧಾ ಆಯೋಗವನ್ನೂ ಬಲಪಡಿಸಿವೆ ಎಂದು ಹೇಳಿದ್ದಾರೆ.

‘ಮೂಲ ವಿಷಯ ಮತ್ತು ವಸ್ತು ಸೃಷ್ಟಿಸುವ ಪ್ರಕಾಶಕರಿಗೆ ಆದಾಯದಲ್ಲಿ ನ್ಯಾಯಯೋಚಿತ ಪಾಲು ದೊರೆಯಬೇಕು. ಸುದ್ದಿ ಉದ್ಯಮದ ಬೆಳವಣಿಗೆಯ ದೃಷ್ಟಿಯಿಂದ ಇದು ತುಂಬಾ ಮುಖ್ಯವಾದುದು. ಕೋವಿಡ್‌ ನಂತರದ ಕಾಲಘಟ್ಟದಲ್ಲಿ ಡಿಜಿಟಲ್‌ ಸುದ್ದಿ ಉದ್ಯಮವಷ್ಟೇ ಅಲ್ಲದೆ ಮುದ್ರಣ ಮಾಧ್ಯಮಗಳೂ ಅರ್ಥಿಕ ಸಮಸ್ಯೆಯನ್ನು ಎದುರಿಸಿವೆ. ಮುದ್ರಣ ಮಾಧ್ಯಮಗಳ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಿದ್ದೇ ಆದಲ್ಲಿ ಪತ್ರಿಕೋದ್ಯಮದ ಭವಿಷ್ಯ ಮಸುಕಾಗುವುದಂತೂ ಸ್ಪಷ್ಟ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಗೂಗಲ್ ಮತ್ತು ಫೇಸ್‌ಬುಕ್ ವೀಕ್ಷಕರ ಆಕರ್ಷಿಸುವಲ್ಲಿ, ಹಣಗಳಿಸುವಲ್ಲಿ ಮತ್ತು ಡಿಜಿಟಲ್ ಜಾಹೀರಾತು ಆದಾಯವನ್ನು ಗಳಿಸುವಲ್ಲಿ ಬಹಳ ಯಶಸ್ವಿಯಾಗಿದೆ. ಆದರೆ ಅದನ್ನು ಮಾಡುವ ಭಾಗವಾಗಿ, ಅವರು ಸುದ್ದಿ ಮಾಧ್ಯಮ ವ್ಯವಹಾರಗಳಿಂದ ರಚಿಸಲಾದ ಮತ್ತು ಪಾವತಿಸಿದ ವಿಷಯವನ್ನು ಬಳಸುತ್ತಿದ್ದಾರೆ. ಪರಿಣಾಮವಾಗಿ, ಪತ್ರಿಕೋದ್ಯಮವನ್ನು ಬೆಂಬಲಿಸುವ ಆದಾಯವು ಕುಸಿಯುತ್ತಿದೆ, ಇದು ಪತ್ರಿಕೋದ್ಯಮದ ಪ್ರಮಾಣವನ್ನು ಕಡಿಮೆ ಮಾಡುತ್ತಿದೆ ಮತ್ತು ಅದು ನಕಾರಾತ್ಮಕ ಪ್ರತಿಕ್ರಿಯೆಯ ಶೂನ್ಯ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com