ರೈಲಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಟಿಕೆಟ್ ಪರಿಶೀಲಕ, ಮತ್ತೊಬ್ಬ ವ್ಯಕ್ತಿಯಿಂದ ಕೃತ್ಯ

ಉತ್ತರ ಪ್ರದೇಶದಲ್ಲಿ ಚಲಿಸುತ್ತಿರುವ ರೈಲಿನಲ್ಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ರೈಲಿನ ಟಿಕೆಟ್ ಪರಿಶೀಲಕ, ಮತ್ತೊಬ್ಬ ವ್ಯಕ್ತಿ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಂಭಾಲ್: ಉತ್ತರ ಪ್ರದೇಶದಲ್ಲಿ ಚಲಿಸುತ್ತಿರುವ ರೈಲಿನಲ್ಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ರೈಲಿನ ಟಿಕೆಟ್ ಪರಿಶೀಲಕ, ಮತ್ತೊಬ್ಬ ವ್ಯಕ್ತಿ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಚಂದೌಸಿ ಪ್ರದೇಶದಲ್ಲಿ ಜನವರಿ 16 ರಂದು ಈ ಘಟನೆ ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಎಸಿ ಕೋಚ್‌ನಲ್ಲಿ ತನ್ನ ಸಹಚರನೊಂದಿಗೆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಪ್ರಯಾಣ ಟಿಕೆಟ್ ಪರೀಕ್ಷಕನನ್ನು (ಟಿಟಿಇ) ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಆರೋಪಿ ಟಿಟಿಇಯನ್ನು ರಾಜು ಸಿಂಗ್ ಎಂದು ಗುರುತಿಸಲಾಗಿದ್ದು, ಮಹಿಳೆಗೆ ಪರಿಚಯಸ್ಥನಾಗಿದ್ದ ಎಂದು ಚಂದೌಸಿ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಕೆಬಿ ಸಿಂಗ್ ಹೇಳಿದ್ದಾರೆ. 

ಸಂಭಾಲ್ ಜಿಲ್ಲೆಯ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದು, ಅದರ ಆಧಾರದ ಮೇಲೆ ಆರೋಪಿ ಟಿಟಿಇಯನ್ನು ಬಂಧಿಸಲಾಗಿದೆ. ಜನವರಿ 16 ರಂದು ಮಹಿಳೆ ಚಾಂದೌಸಿ ರೈಲು ನಿಲ್ದಾಣದಲ್ಲಿ ರೈಲಿಗೆ ಕಾಯುತ್ತಿದ್ದಾಗ ಆರೋಪಿ ಟಿಟಿಇ ಆಕೆಯನ್ನು ಎಸಿ ಕೋಚ್‌ನಲ್ಲಿ ಕೂರಿಸಿದ್ದಾನೆ. ಆಕೆ ಚಂದೌಸಿಯಿಂದ ಪ್ರಯಾಗರಾಜ್‌ನ ಸುಬೇದರ್‌ಗಂಜ್‌ಗೆ ಹೋಗುತ್ತಿದ್ದಳು. ಆರೋಪಿ ಮಹಿಳೆಗೆ ಪರಿಚಿತನಾಗಿದ್ದ. ರಾತ್ರಿ 10 ಗಂಟೆಯ ಸುಮಾರಿಗೆ ಚಂದೌಸಿ ಮತ್ತು ಅಲಿಗಢ್, ಟಿಟಿಇ ಇನ್ನೊಬ್ಬ ವ್ಯಕ್ತಿಯೊಂದಿಗೆ ಬಂದಿದ್ದು, ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆ. ಅತ್ಯಾಚಾರ ಮತ್ತೋರ್ವ ವ್ಯಕ್ತಿ ಸಂತ್ರಸ್ಥ ಮಹಿಳೆಗೆ ಅಪರಿಚಿತನಾಗಿದ್ದ ಎನ್ನಲಾಗಿದೆ. 

ಮಹಿಳೆ ದೂರಿನ ಹಿನ್ನಲೆಯಲ್ಲಿ ಪೊಲೀಸರು ಆ ನಿಲ್ದಾಣ ಇತರೆ ಟಿಟಿಇಗಳನ್ನು ಮಹಿಳೆ ಮುಂದೆ ಗುರುತು ಪತ್ತೆಗೆ ಪರೇಡ್ ನಡೆಸಿದ್ದು, ಈ ವೇಳೆ ಮಹಿಳೆಗೆ ಮತ್ತೋರ್ವ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗಿಲ್ಲ.. ಮಹಿಳೆಯ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 376ಡಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನುಳಿದ ಆರೋಪಿಗಳನ್ನು ಪತ್ತೆ ಹಚ್ಚುವ ಪ್ರಯತ್ನ ಮುಂದುವರಿದಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com