ಜಮ್ಮುವಿನಲ್ಲಿ ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಭಾಗಿ

ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಕೊನೆಯ ಹಂತಕ್ಕೆ ತಲುಪಿದೆ. ಮಂಗಳವಾರ ಬೆಳಗ್ಗೆ ಗ್ಯಾರಿಸನ್ ಟೌನ್ ನಗ್ರೋಟಾದಿಂದ ಪುನಾರಂಭಗೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ನಟಿ ಹಾಗೂ ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಸೇರಿಕೊಂಡಿದ್ದಾರೆ. 
ಜಮ್ಮು ಜಿಲ್ಲೆಯ ನಾಗ್ರೋಟಾದಲ್ಲಿ ನಡೆದ ಪಕ್ಷದ 'ಭಾರತ್ ಜೊಡೊ ಯಾತ್ರೆ' ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಾಲಿವುಡ್ ನಟ ಉರ್ಮಿಲಾ ಮಾತೊಂಡ್ಕರ್ ಅವರೊಂದಿಗೆ.
ಜಮ್ಮು ಜಿಲ್ಲೆಯ ನಾಗ್ರೋಟಾದಲ್ಲಿ ನಡೆದ ಪಕ್ಷದ 'ಭಾರತ್ ಜೊಡೊ ಯಾತ್ರೆ' ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಾಲಿವುಡ್ ನಟ ಉರ್ಮಿಲಾ ಮಾತೊಂಡ್ಕರ್ ಅವರೊಂದಿಗೆ.

ಜಮ್ಮು: ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಕೊನೆಯ ಹಂತಕ್ಕೆ ತಲುಪಿದೆ. ಮಂಗಳವಾರ ಬೆಳಗ್ಗೆ ಗ್ಯಾರಿಸನ್ ಟೌನ್ ನಗ್ರೋಟಾದಿಂದ ಪುನಾರಂಭಗೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ನಟಿ ಹಾಗೂ ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಸೇರಿಕೊಂಡಿದ್ದಾರೆ. 

1990 ರ ದಶಕದ ಜನಪ್ರಿಯ ಬಾಲಿವುಡ್ ತಾರೆ ಊರ್ಮಿಳಾ ಮಾತೋಂಡ್ಕರ್, ಬಿಗಿ ಭದ್ರತೆಯ ನಡುವೆ ಬೆಳಗ್ಗೆ 8 ರ ಸುಮಾರಿಗೆ ಸೇನಾ ಗ್ಯಾರಿಸನ್ ಬಳಿಯಿಂದ ಮೆರವಣಿಗೆ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ರಾಹುಲ್ ಗಾಂಧಿ ಯವರ ಜೊತೆ ಯಾತ್ರೆಯಲ್ಲಿ ಹೆಜ್ಜೆ ಹಾಕಲು ಪ್ರಾರಂಭಿಸಿದರು. ಅವರನ್ನು ಸ್ವಾಗತಿಸಲು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಮಾರ್ಗದ ಉದ್ದಕ್ಕೂ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದರು.

48 ವರ್ಷದ ಊರ್ಮಿಳಾ ಮಾತೋಂಡ್ಕರ್ ಅವರು ಕಾಂಗ್ರೆಸ್ ಸೇರಿದ್ದ ಆರು ತಿಂಗಳ ಅಲ್ಪಾವಧಿ ನಂತರ 2019 ರ ಸೆಪ್ಟೆಂಬರ್‌ನಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿ 2020 ರಲ್ಲಿ ಶಿವಸೇನೆಗೆ ಸೇರಿದ್ದರು.

ಖ್ಯಾತ ಲೇಖಕ ಪೆರುಮಾಳ್ ಮುರುಗನ್ ಮತ್ತು ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಕಾರ್ ರಸೂಲ್ ವಾನಿ, ಅವರ ಹಿಂದಿನ ಜಿ ಎ ಮಿರ್ ಮತ್ತು ಮಾಜಿ ಸಚಿವ ಅಬ್ದುಲ್ ಹಮೀದ್ ಕರ್ರಾ ಮೊದಲಾದವರು ಇಂದು ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. 

ಕಳೆದ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆ ಕಳೆದ ವಾರ ಪಂಜಾಬ್‌ನಿಂದ ಜಮ್ಮು-ಕಾಶ್ಮೀರ ಪ್ರವೇಶಿಸಿ ಸೋಮವಾರ ಜಮ್ಮು ನಗರಕ್ಕೆ ತಲುಪಿತ್ತು. ಜನವರಿ 30 ರಂದು ಶೇರ್-ಎ-ಕಾಶ್ಮೀರ ಕ್ರಿಕೆಟ್ ಸ್ಟೇಡಿಯಂನಲ್ಲಿ ಭವ್ಯ ರ್ಯಾಲಿಯೊಂದಿಗೆ ಶ್ರೀನಗರದಲ್ಲಿ ಪರಾಕಾಷ್ಠೆಯಾಗುವ ಮೊದಲು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ರಾಂಬನ್ ಮತ್ತು ಬನಿಹಾಲ್‌ನಲ್ಲಿ ಎರಡು ರಾತ್ರಿ ನಿಲುಗಡೆಗಳನ್ನು ಮಾಡಲು ನಿರ್ಧರಿಸಲಾಗಿದೆ.

ಲಡಾಖ್ ಟೆರಿಟೋರಿಯಲ್ ಕಾಂಗ್ರೆಸ್ ಅಧ್ಯಕ್ಷ ನವಾಂಗ್ ರಿಗ್ಜಿನ್ ಜೋರಾ ನೇತೃತ್ವದ 65 ಸದಸ್ಯರ ಪ್ರಬಲ ಲಡಾಖ್ ನಿಯೋಗವು ಯಾತ್ರೆಯ ಪ್ರಾರಂಭದಲ್ಲಿ ರಾಹುಲ್ ಗಾಂಧಿಯವರೊಂದಿಗೆ ಸೇರಿಕೊಂಡು ತಮ್ಮ ಜನರ ಸಮಸ್ಯೆಗಳು ಮತ್ತು ಕಾಳಜಿಗಳ ಬಗ್ಗೆ ಅವರಿಗೆ ವಿವರಿಸಿದರು. 

ಕಾಶ್ಮೀರಿ ಪಂಡಿತರ ವಲಸಿಗ ಮಹಿಳೆಯರ ಗುಂಪು, ತಮ್ಮ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಮತ್ತು ಹೂವಿನ ದಳಗಳನ್ನು ಹಿಡಿದು, ರಾಹುಲ್ ಗಾಂಧಿಯನ್ನು ಸ್ವಾಗತಿಸಲು ಪ್ರಸಿದ್ಧ ಕೋಲ್-ಕಂಡೋಲಿ ದೇವಸ್ಥಾನದ ಹೊರಗೆ ಕಾಯುತ್ತಿದ್ದರು.

"ನಾವು ಕಾಶ್ಮೀರದಿಂದ ವಲಸೆ ಬಂದ ನಂತರ ಕಳೆದ ಮೂರು ದಶಕಗಳಿಂದ ಜಮ್ಮುವಿನಲ್ಲಿ ಅಲೆದಾಡುತ್ತಿದ್ದೇವೆ. ಈ ಹಿಂದೆ ಕಾಂಗ್ರೆಸ್ ಪಕ್ಷವು ಉದ್ಯೋಗ ನೀಡುವ ಮೂಲಕ ಕಣಿವೆಯಲ್ಲಿ ನಮ್ಮ ಪುನರ್ವಸತಿಗೆ ಸಹಾಯ ಮಾಡಬಹುದೆಂಬ ಕಾರಣಕ್ಕಾಗಿ ನಾವು ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಇಲ್ಲಿಗೆ ಬಂದಿದ್ದೇವೆ. ಎಂದು ಗೀತಾ ಕೌಲ್ ಎಂಬುವವರು ಸುದ್ದಿಸಂಸ್ಥೆಗೆ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com