ಶಿವರಾಜ್ ಸಿಂಗ್ ಚೌಹಾಣ್.
ಶಿವರಾಜ್ ಸಿಂಗ್ ಚೌಹಾಣ್.

ಸರ್ಜಿಕಲ್ ಸ್ಟ್ರೈಕ್ ಕುರಿತು ದಿಗ್ವಿಜಯ್ ಸಿಂಗ್ ಹೇಳಿಕೆ: ಕಾಂಗ್ರೆಸ್ ಡಿಎನ್‌ಎ ಪಾಕಿಸ್ತಾನದ ಪರವಾಗಿದೆ- ಶಿವರಾಜ್ ಸಿಂಗ್ ಚೌಹಾಣ್

ಕಾಂಗ್ರೆಸ್ ಡಿಎನ್ಎ ಪಾಕಿಸ್ತಾನದ ಪರವಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಂಗಳವಾರ ಹೇಳಿದ್ದಾರೆ.

ಭೋಪಾಲ್ (ಮಧ್ಯಪ್ರದೇಶ): ಕಾಂಗ್ರೆಸ್ ಡಿಎನ್ಎ ಪಾಕಿಸ್ತಾನದ ಪರವಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಂಗಳವಾರ ಹೇಳಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ಕುರಿತು ದಿಗ್ವಿಜಯ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಕಾಂಗ್ರೆಸ್‌ನ ಡಿಎನ್‌ಎ ಪಾಕಿಸ್ತಾನದ ಪರವಾಗಿದೆ, ಅವರು (ಕಾಂಗ್ರೆಸ್) ಕೆಲವೊಮ್ಮೆ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮತ್ತು ಕೆಲವೊಮ್ಮೆ ರಾಮನ ಅಸ್ತಿತ್ವದ ಪುರಾವೆಗಳನ್ನು ಕೇಳುತ್ತಾರೆ. ಇದೀಗ ಮತ್ತೊಮ್ಮೆ ದಿಗ್ವಿಜಯ್ ಸಿಂಗ್ ಅವರು ಭಾರತ್ ಜೋಡೋ ಯಾತ್ರೆ ವೇಳೆ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪುರಾವೆ ಕೇಳಿದ್ದಾರೆಂದು ಕಿಡಿಕಾರಿದ್ದಾರೆ.

ದಿಗ್ವಿಜಯ್ ಸಿಂಗ್ ಅವರು ಸೈನಿಕರ ಮನೋಸ್ಥೈರ್ಯವನ್ನು ಕುಗ್ಗಿಸುವ ಪಾಪ ಮಾಡುತ್ತಿದ್ದಾರೆ. ತಮ್ಮ ಹೇಳಿಕೆ ಮೂಲಕ ದಿಗ್ವಿಜಯ್ ಸಿಂಗ್ ಅವರು, ಪಾಕಿಸ್ತಾನದೊಂದಿಗೆ ನಿಂತಿದ್ದಾರೆಂದು ತೋರಿಸುತ್ತಿದ್ದಾರೆಂದು ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆಯಲ್ಲಿ ತುಕ್ಡೆ-ತುಕ್ಡೆ ಗ್ಯಾಂಗ್ ಸೇರಿಕೊಂಡಿದ್ದು, ಇದು ಎಂತಹ ಭಾರತ್ ಜೋಡೋ ಯಾತ್ರೆ ಎಂಬ ಪ್ರಶ್ನೆಯನ್ನು ನಾನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂದಿಡುತ್ತಿದ್ದೇನೆ. ಸೇನೆಯ ನೈತಿಕ ಸ್ಥೈರ್ಯ ಕುಸಿಯುತ್ತಿದೆ. ರಾಹುಲ್ ಗಾಂಧಿ ಕೂಡ ಸೇನೆಯ ಬಲದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇದು ದೇಶಭಕ್ತಿ ಅಲ್ಲ. ಕನಿಷ್ಠ ಪಕ್ಷ ಸೇನೆಯ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಪಾಪವನ್ನು ಕಾಂಗ್ರೆಸ್ ಮಾಡಬಾರದು ಎಂದು ತಿಳಿಸಿದ್ದಾರೆ.

ಇದೇ ವೇಳೆ ದಿಗ್ವಿಜಯ್ ಸಿಂಗ್ ಸರ್ಕಾರದ ಅವಧಿಯಲ್ಲಿ ಮಧ್ಯಪ್ರದೇಶವು ಒಂದು ಕಾಲದಲ್ಲಿ ಸಿಮಿ (ಭಾರತದ ವಿದ್ಯಾರ್ಥಿಗಳ ಇಸ್ಲಾಮಿಕ್ ಚಳುವಳಿ) ಸಂಘಟನೆಯ ಭದ್ರಕೋಟೆಯಾಗಿತ್ತು ಎಂದು ಆರೋಪಿಸಿದ್ದಾರೆ.

ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ದಿಗ್ವಿಜಯ್ ಸಿಂಗ್ ಅವರು, ಕೇಂದ್ರ ನಾಯಕರು ಸರ್ಜಿಕಲ್ ಸ್ಟ್ರೈಕ್‌ಗಳ ಬಗ್ಗೆ ಮಾತನಾಡುತ್ತಾರೆ. ಪಾಕಿಸ್ತಾನದ ಅನೇಕ ಉಗ್ರರನ್ನು ಕೊಂದಿದ್ದಾರೆ ಎನ್ನುತ್ತಾರೆ, ಆದರೆ, ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಮೋದಿ ಸರ್ಕಾರ ಸುಳ್ಳಿನ ಮೇಲೆ ಆಡಳಿತ ನಡೆಸುತ್ತಿದೆ. ಈ ದೇಶ ಎಲ್ಲರಿಗೂ ಸೇರಿದ್ದು ಎಂದಿದ್ದರು.

Related Stories

No stories found.

Advertisement

X
Kannada Prabha
www.kannadaprabha.com