ಆಂಧ್ರ ಪ್ರದೇಶದ ಮಾಜಿ ಗೃಹ ಸಚಿವ ಮೇಕತೋಟಿ ಸುಚರಿತ ಚಾಲಕರಾಗಿದ್ದ ಹೆಡ್ ಕಾನ್‌ಸ್ಟೆಬಲ್ ಆತ್ಮಹತ್ಯೆ
ಆಂಧ್ರ ಪ್ರದೇಶದ ಮಾಜಿ ಗೃಹ ಸಚಿವ ಮೇಕತೋಟಿ ಸುಚರಿತ ಅವರ ಚಾಲಕ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಹೆಡ್ ಕಾನ್‌ಸ್ಟೆಬಲ್ ಚೆನ್ನಕೇಶವುಲು ಎಂದು ಗುರುತಿಸಲಾಗಿದ್ದು, ಕಳೆದ ಮೂರು ವರ್ಷಗಳಿಂದ ಸುಚರಿತ ಅವರ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು.
Published: 24th January 2023 07:34 AM | Last Updated: 24th January 2023 03:48 PM | A+A A-

ಸಾಂದರ್ಭಿಕ ಚಿತ್ರ
ಗುಂಟೂರು: ಆಂಧ್ರ ಪ್ರದೇಶದ ಮಾಜಿ ಗೃಹ ಸಚಿವ ಮೇಕತೋಟಿ ಸುಚರಿತ ಅವರ ಚಾಲಕ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಹೆಡ್ ಕಾನ್‌ಸ್ಟೆಬಲ್ ಚೆನ್ನಕೇಶವುಲು ಎಂದು ಗುರುತಿಸಲಾಗಿದ್ದು, ಕಳೆದ ಮೂರು ವರ್ಷಗಳಿಂದ ಸುಚರಿತ ಅವರ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು.
ಪೊಲೀಸರ ಪ್ರಕಾರ, ಅವರು ನಗರದ ಬ್ರೋಡಿಪೇಟ್‌ನಲ್ಲಿರುವ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಊಟಕ್ಕೆಂದು ತನ್ನ ಕೋಣೆಗೆ ತೆರಳಿದ ಆತ ತನ್ನ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರ ಶವವನ್ನು ಕಂಡ ಕೆಲವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಅರುಂಡೇಲಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಗುಂಟೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರಿಫ್ ಹಫೀಜ್ ಅವರು ಕೊಠಡಿಗೆ ಭೇಟಿ ನೀಡಿ ಘಟನೆಯ ಬಗ್ಗೆ ವಿಚಾರಿಸಿದ್ದಾರೆ. ಪೊಲೀಸರು ಚೆನ್ನಕೇಶವುಲು ಅವರ ಸಾವಿನ ಸುದ್ದಿಯನ್ನು ಗ್ರಾಮದಲ್ಲಿ ವಾಸಿಸುವ ಅವರ ಕುಟುಂಬಕ್ಕೆ ತಿಳಿಸಿದರು.