ಸ್ಪೈಸ್‌ಜೆಟ್‌ ವಿಮಾನದಲ್ಲಿನ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ; ವ್ಯಕ್ತಿಯ ಬಂಧನ

ದೆಹಲಿ-ಹೈದರಾಬಾದ್ ಸ್ಪೈಸ್‌ಜೆಟ್ ವಿಮಾನದಲ್ಲಿ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಯಾಣಿಕನನ್ನು ಏರ್‌ಲೈನ್ ಭದ್ರತಾ ಅಧಿಕಾರಿ ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ಇಲ್ಲಿ ತಿಳಿಸಿದ್ದಾರೆ.
ಸ್ಪೈಸ್‌ಜೆಟ್‌ ವಿಮಾನದಲ್ಲಿನ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ತೋರಿದ್ದ ವ್ಯಕ್ತಿಯ ಬಂಧನ
ಸ್ಪೈಸ್‌ಜೆಟ್‌ ವಿಮಾನದಲ್ಲಿನ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ತೋರಿದ್ದ ವ್ಯಕ್ತಿಯ ಬಂಧನ

ನವದೆಹಲಿ: ದೆಹಲಿ-ಹೈದರಾಬಾದ್ ಸ್ಪೈಸ್‌ಜೆಟ್ ವಿಮಾನದಲ್ಲಿ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಯಾಣಿಕನನ್ನು ಏರ್‌ಲೈನ್ ಭದ್ರತಾ ಅಧಿಕಾರಿ ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ಇಲ್ಲಿ ತಿಳಿಸಿದ್ದಾರೆ.

ಆರೋಪಿಯನ್ನು ದೆಹಲಿಯ ಜಾಮಿಯಾ ನಗರದ ನಿವಾಸಿ ಅಬ್ಸರ್ ಆಲಂ ಎಂದು ಗುರುತಿಸಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಸೋಮವಾರ ಸಂಜೆ 4.39ಕ್ಕೆ, ದೆಹಲಿಯಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಗೆ ಪ್ರಯಾಣಿಕರೊಬ್ಬರು ಕಿರುಕುಳ ನೀಡಿದ್ದಾಗಿ ಪೊಲೀಸ್ ನಿಯಂತ್ರಣ ಕೊಠಡಿಗೆ (ಪಿಸಿಆರ್) ಕರೆ ಬಂದಿದೆ. ಈ ಕರೆಯನ್ನು ಸ್ಪೈಸ್‌ಜೆಟ್ ಏರ್‌ಲೈನ್ಸ್‌ನ ಭದ್ರತಾ ಅಧಿಕಾರಿ ಸುಶಾಂತ್ ಶ್ರೀವಾಸ್ತವ ಮಾಡಿದ್ದಾರೆ. 

ಅಬ್ಸರ್ ತಮ್ಮ ಕುಟುಂಬದೊಂದಿಗೆ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದರು ಮತ್ತು ಟೇಕಾಫ್ ಸಮಯದಲ್ಲಿ, ಅಬ್ಸರ್ ಒಬ್ಬ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದರು. ಬಳಿಕ ಆಪಾದಿತ ವ್ಯಕ್ತಿಯನ್ನು (ಅಬ್ಸರ್) ವಿಮಾನದಿಂದ ಕೆಳಗಿಳಿಸಿ, ಸ್ಪೈಸ್‌ಜೆಟ್‌ನ ಭದ್ರತಾ ಸಿಬ್ಬಂದಿ ಮತ್ತು ಪಿಸಿಆರ್ ಸಿಬ್ಬಂದಿ ಆತನನ್ನು ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐ) ಪೊಲೀಸ್ ಠಾಣೆಗೆ  ಕರೆದೊಯ್ದರು ಎಂದು ಅಧಿಕಾರಿ ಹೇಳಿದರು.

ಪೊಲೀಸರು ಸೆಕ್ಷನ್ 354 ಎ (ಲೈಂಗಿಕ ಕಿರುಕುಳ ಮತ್ತು ಲೈಂಗಿಕ ಕಿರುಕುಳಕ್ಕಾಗಿ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಆರೋಪಿಯನ್ನು ಬಂಧಿಸಲಾಗಿದೆ.

ಸೋಮವಾರದಂದು ತನ್ನ SG-8133 ದೆಹಲಿ-ಹೈದರಾಬಾದ್ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಅಶಿಸ್ತಿನ ಮತ್ತು ಅನುಚಿತ ರೀತಿಯಲ್ಲಿ ವರ್ತಿಸಿದರು. ಕ್ಯಾಬಿನ್ ಸಿಬ್ಬಂದಿಗೆ ಕಿರುಕುಳ ಮತ್ತು ತೊಂದರೆ ಉಂಟುಮಾಡಿದರು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಜನವರಿ 23 ರಂದು ಸ್ಪೈಸ್‌ಜೆಟ್ ವಿಮಾನವು (SG-8133) ದೆಹಲಿಯಿಂದ ಹೈದರಾಬಾದ್‌ಗೆ ತೆರಳಲು ನಿಗದಿಯಾಗಿತ್ತು. ದೆಹಲಿಯಲ್ಲಿ ಬೋರ್ಡಿಂಗ್ ಸಮಯದಲ್ಲಿ, ಓರ್ವ ಪ್ರಯಾಣಿಕರು ಅಶಿಸ್ತಿನ ಮತ್ತು ಅನುಚಿತ ರೀತಿಯಲ್ಲಿ ವರ್ತಿಸಿದರು. ಕ್ಯಾಬಿನ್ ಸಿಬ್ಬಂದಿಗೆ ಕಿರುಕುಳ ಮತ್ತು ಅಡಚಣೆ ಉಂಟುಮಾಡಿದರು ಎಂದು ಸ್ಪೈಸ್‌ಜೆಟ್ ವಕ್ತಾರರು ತಿಳಿಸಿದ್ದಾರೆ.

ಸಿಬ್ಬಂದಿಯು ಪೈಲಟ್-ಇನ್-ಕಮಾಂಡ್ (ಪಿಐಸಿ) ಮತ್ತು ಭದ್ರತಾ ಸಿಬ್ಬಂದಿಗೆ ವಿಚಾರವನ್ನು ತಿಳಿಸಿದ್ದಾರೆ. ಬಳಿಕ ಒಟ್ಟಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಮತ್ತು ಸಹ ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಿ ಭದ್ರತಾ ತಂಡಕ್ಕೆ ಹಸ್ತಾಂತರಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com