ರಾಮಚರಿತಮಾನಸ ಕುರಿತು ವಿವಾದಾತ್ಮಕ ಹೇಳಿಕೆ: ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಕೇಸ್ ದಾಖಲು
ರಾಮಚರಿತಮಾನಸ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಮಂಗಳವಾರ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Published: 24th January 2023 05:28 PM | Last Updated: 24th January 2023 08:22 PM | A+A A-

ಸ್ವಾಮಿ ಪ್ರಸಾದ್ ಮೌರ್ಯ
ಲಖನೌ: ರಾಮಚರಿತಮಾನಸ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಮಂಗಳವಾರ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮಚರಿತಮಾನಸ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಸ್ವಾಮಿ ಪ್ರಸಾದ್ ಮೌರ್ಯ ಅವರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಬಜಾರ್ ಖಲಾ ಪ್ರದೇಶದ ಐಶ್‌ಬಾಗ್ ಪ್ರದೇಶದ ನಿವಾಸಿ ಶಿವೇಂದ್ರ ಮಿಶ್ರಾ ಅವರು ನೀಡಿದ ದೂರಿನ ಆಧಾರ ಮೇಲೆ ಮೌರ್ಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ರಾಮಚರಿತಮಾನಸ ವಿರುದ್ಧ ಅವಹೇಳನಕಾರಿ ಹೇಳಿಕೆ: ಶಿಕ್ಷಣ ಸಚಿವನ ವಿರುದ್ಧ ಬಿಹಾರ ಕೋರ್ಟ್ ನಲ್ಲಿ ದೂರು ದಾಖಲು!
ಗೋಸ್ವಾಮಿ ತುಳಸೀದಾಸ್ ಬರೆದಿರುವ ರಾಮಚರಿತಮಾನಸ ಮಹಾಕಾವ್ಯದಲ್ಲಿ ದಲಿತರು, ಬುಡಕಟ್ಟು ಜನ ಮತ್ತು ಹಿಂದುಳಿದ ವರ್ಗಗಳನ್ನು ನಿಂದನೆ ಮಾಡಲಾಗಿದೆ ಎಂದು ಮಾಜಿ ಸಚಿವ ಮತ್ತು ಸಮಾಜವಾದಿ ಪಕ್ಷದ ಎಂಎಲ್‌ಸಿ ಸ್ವಾಮಿ ಪ್ರಸಾದ್ ಮೌರ್ಯ ಹೇಳಿದ್ದರು.
ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ. ಆದರೆ ಧರ್ಮದ ಹೆಸರಿನಲ್ಲಿ ಒಂದು ಸಮುದಾಯ ಅಥವಾ ಜಾತಿಯನ್ನು ಅವಮಾನಿಸಿದರೆ ಅದು ಆಕ್ಷೇಪಾರ್ಹ ಎಂದು ಮೌರ್ಯ ಹೇಳಿದ್ದರು.