ಕುರ್ಚಿ ತರಲು ತಡಮಾಡಿದ್ದಕ್ಕೆ ಕಾರ್ಯಕರ್ತನ ಮೇಲೆ ಕಲ್ಲೆಸೆದ ತಮಿಳು ನಾಡಿನ ಸಚಿವ ನಾಸರ್
ತಮಿಳು ನಾಡಿನ ಹೈನುಗಾರಿಕೆ ಅಭಿವೃದ್ಧಿ ಸಚಿವ ಎಸ್ ಎಂ ನಾಸರ್ ಅವರು ಪಕ್ಷದ ಕಾರ್ಯಕರ್ತನ ಮೇಲೆ ಕಲ್ಲು ತೂರಾಟ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Published: 24th January 2023 06:10 PM | Last Updated: 24th January 2023 06:14 PM | A+A A-

ಕಾರ್ಯಕರ್ತನ ಮೇಲೆ ಕಲ್ಲೆಸೆತ
ಚೆನ್ನೈ: ತಮಿಳು ನಾಡಿನ ಹೈನುಗಾರಿಕೆ ಅಭಿವೃದ್ಧಿ ಸಚಿವ ಎಸ್ ಎಂ ನಾಸರ್ ಅವರು ಪಕ್ಷದ ಕಾರ್ಯಕರ್ತನ ಮೇಲೆ ಕಲ್ಲು ತೂರಾಟ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತನಗೆ ಕುಳಿತುಕೊಳ್ಳಲು ಕುರ್ಚಿ ನೀಡಲು ಸಮಯ ತೆಗೆದುಕೊಂಡಿದ್ದಕ್ಕಾಗಿ ಕಾರ್ಯಕರ್ತನ ಮೇಲೆ ನಾಸರ್ ತೀವ್ರ ಅಸಮಾಧಾನಗೊಂಡು ಬೊಬ್ಬೆ ಹಾಕುತ್ತಾ ಬೈಯುತ್ತಾರೆ.ಅಷ್ಟಕ್ಕೇ ನಿಲ್ಲದೆ ಕಾರ್ಯಕರ್ತನ ಮೇಲೆ ಕೂಗಾಡಿ ಕಲ್ಲು ಎಸೆಯುತ್ತಾರೆ. ಸಚಿವರ ಜೊತೆಗಿದ್ದ ಡಿಎಂಕೆ ಪದಾಧಿಕಾರಿಗಳಿಬ್ಬರ ನಗುವೂ ಹಿನ್ನಲೆಯಲ್ಲಿ ಕೇಳಿಬರುತ್ತಿದೆ.
ಡಿಎಂಕೆಯ ‘ವೀರ ವನಕ್ಕಂ ನಾಲ್’ ಕಾರ್ಯಕ್ರಮದ ಭಾಗವಾಗಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನಾಳೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿರುವ ತಿರುವಳ್ಳೂರಿನ ಸ್ಥಳದಲ್ಲಿ ಸಚಿವರು ವ್ಯವಸ್ಥೆಗಳನ್ನು ನೋಡಲು ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಹಿಂದಿ ವಿರೋಧಿ ಆಂದೋಲನದ ಸಂದರ್ಭದಲ್ಲಿ ಮಡಿದವರನ್ನು ಸ್ಮರಿಸಲು ಈ ಕಾರ್ಯಕ್ರಮ ನಡೆಯಲಿದೆ.
@xpresstn @XpressBengaluru
— kannadaprabha (@KannadaPrabha) January 24, 2023
ತನಗೆ ಕುಳಿತುಕೊಳ್ಳಲು ಕುರ್ಚಿ ನೀಡಲು ಸಮಯ ತೆಗೆದುಕೊಂಡಿದ್ದಕ್ಕಾಗಿ ಕಾರ್ಯಕರ್ತನ ಮೇಲೆ ನಾಸರ್ ತೀವ್ರ ಅಸಮಾಧಾನಗೊಂಡು ಬೊಬ್ಬೆ ಹಾಕುತ್ತಾ ಬೈಯುತ್ತಾರೆ.ಅಷ್ಟಕ್ಕೇ ನಿಲ್ಲದೆ ಕಾರ್ಯಕರ್ತನ ಮೇಲೆ ಕೂಗಾಡಿ ಕಲ್ಲು ಎಸೆಯುತ್ತಾರೆ. ಸಚಿವರ ಜೊತೆಗಿದ್ದ ಡಿಎಂಕೆ ಪದಾಧಿಕಾರಿಗಳಿಬ್ಬರ ನಗುವೂ ಹಿನ್ನಲೆಯಲ್ಲಿ ಕೇಳಿಬರು pic.twitter.com/TKm5h20Ana