ಲಖನೌನಲ್ಲಿ ಕಟ್ಟಡ ಕುಸಿತ: ಸಮಾಜವಾದಿ ಪಕ್ಷದ ಶಾಸಕರ ಪುತ್ರನ ಬಂಧನ

ಲಖನೌನಲ್ಲಿ ಮಂಗಳವಾರ ರಾತ್ರಿ ಬಹುಮಹಡಿ ಕಟ್ಟಡವೊಂದು ಕುಸಿದುಬಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸಮಾಜವಾದಿ ಪಕ್ಷ(ಎಸ್‌ಪಿ)ದ ಶಾಸಕರ...
ರಕ್ಷಣಾ ಕಾರ್ಯಾಚರಣೆ ಚಿತ್ರ
ರಕ್ಷಣಾ ಕಾರ್ಯಾಚರಣೆ ಚಿತ್ರ

ಲಖನೌ: ಲಖನೌನಲ್ಲಿ ಮಂಗಳವಾರ ರಾತ್ರಿ ಬಹುಮಹಡಿ ಕಟ್ಟಡವೊಂದು ಕುಸಿದುಬಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸಮಾಜವಾದಿ ಪಕ್ಷ(ಎಸ್‌ಪಿ)ದ ಶಾಸಕರ ಪುತ್ರನನ್ನು ಬುಧವಾರ ಬಂಧಿಸಲಾಗಿದೆ.

ಎಸ್‌ಪಿ ಶಾಸಕ ಮತ್ತು ಮಾಜಿ ಸಚಿವ ಶಾಹಿದ್ ಮಂಜೂರ್ ಅವರ ಪುತ್ರ ನವಾಜಿಶ್ ಶಾಹಿದ್‌ನನ್ನು ಮೀರತ್‌ ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಮೂವರ ಪೈಕಿ ನವಾಜಿಶ್ ಶಾಹಿದ್ ಸಹ ಒಬ್ಬರಾಗಿದ್ದು, ಮೊಹಮ್ಮದ್ ತಾರಿಕ್ ಮತ್ತು ಫಹಾದ್ ಯಜ್ದಾನಿ ಇತರ ಇಬ್ಬರು ಆರೋಪಿಗಳಾಗಿದ್ದಾರೆ.

ನವಾಜಿಶ್ ಶಾಹಿದ್, ಯಜ್ದಾನ್ ಬಿಲ್ಡರ್ಸ್ ನಿರ್ಮಿಸಿದ ಕಟ್ಟಡದ ಜಮೀನಿನ ಮಾಲೀಕ ಎಂದು ಆರೋಪಿಸಲಾಗಿದೆ.

ಶಾಹಿದ್ ಮಂಜೂರ್ ಅವರು ಪಶ್ಚಿಮ ಉತ್ತರ ಪ್ರದೇಶದಲ್ಲಿ ಹಿರಿಯ ಎಸ್‌ಪಿ ನಾಯಕರಾಗಿದ್ದು, ಪ್ರಸ್ತುತ ವಿಧಾನಸಭೆಯಲ್ಲಿ ಕಿಥೋರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com