
ಗ್ರೆನೇಡ್
ಶ್ರೀನಗರ: ಜಮ್ಮು-ಕಾಶ್ಮೀರದ ಪೂಂಚ್ ಪ್ರದೇಶದಲ್ಲಿ ಮಾಜಿ ಶಾಸಕನ ನಿವಾಸದಲ್ಲಿ ಗ್ರೆನೇಡ್ ಪತ್ತೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸುರನ್ಕೋಟ್ ನ ಮಾಜಿ ಶಾಸಕ ಚೌಧರಿ ಮೊಹಮ್ಮದ್ ಅಕ್ರಮ್ ಅವರ ನಿವಾಸದ ಹೊರ ಭಾಗದಲ್ಲಿ ಒಂದು ಗ್ರೆನೇಡ್ ಪತ್ತೆಯಾಗಿದ್ದು, ಪ್ರಾಸಂಗಿಕವಾಗಿ ನಾಲ್ಕು ದಿನಗಳ ಹಿಂದೆ ಲಘು ಸ್ಫೋಟ ಸಂಭವಿಸಿತ್ತು.
ಪೂಂಚ್ ನಲ್ಲಿ ಸೇನೆ ಬುಧವಾರ (ಜ.25) ರಂದು ಸೇನೆ ಉಗ್ರರ ಎರಡು ಅಡಗುದಾಣಗಳನ್ನು ಪತ್ತೆ ಮಾಡಿತ್ತು ಹಾಗೂ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿತ್ತು.
ಒಂದು ಅಡಗುದಾಣ ರಟ್ಟಾ ಜಬಾರದ ಅರಣ್ಯದಲ್ಲಿ ಪತ್ತೆಯಾಗಿದ್ದರೆ, ಮತ್ತೊಂದು ಧೋಬಾ ಅರಣ್ಯದಲ್ಲಿ ಪತ್ತೆಯಾಗಿದೆ ಎಂದು ಸೇನೆ ಮಾಹಿತಿ ನೀಡಿದೆ.
ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವುದಕ್ಕೆ ಜಮ್ಮು-ಕಾಶ್ಮೀರ ಸರ್ಕಾರ ಭಯೋತ್ಪಾದನಾ ನಿಗಾ ಗುಂಪು ಸ್ಥಾಪಿಸಿದ್ದು 2 ವಿವಿಧ ಹುದ್ದೆಗಳನ್ನು ಈ ಸ್ಕ್ವಾಡ್ ಅಡಿಯಲ್ಲಿ ಸೃಷ್ಟಿಸಿದೆ. ಇನ್ನು ಜಮ್ಮು-ಕಾಶ್ಮೀರ ಪೊಲೀಸರು ಉಗ್ರ ಸಂಘಟನೆ ಸೇರಲು ಯತ್ನಿಸುತ್ತಿದ್ದ 5 ಮಂದಿ ಯುವಕರನ್ನು ತಡೆದಿದ್ದಾರೆ.