ಈ ಬಾರಿ ಗಣರಾಜ್ಯೋತ್ಸವದಲ್ಲಿ ಭಾರತೀಯ ಸೇನೆಯಿಂದ 'ಮೇಡ್ ಇನ್ ಇಂಡಿಯಾ' ಶಸ್ತ್ರಾಸ್ತ್ರ ವ್ಯವಸ್ಥೆಗಳ ಪ್ರದರ್ಶನ

ಭಾರತವು ತನ್ನ 74 ನೇ ಗಣರಾಜ್ಯೋತ್ಸವವನ್ನು ಇಂದು ಗುರುವಾರ ಆಚರಿಸಿಕೊಳ್ಳುತ್ತಿದ್ದು, ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದಲ್ಲಿ ಸ್ವದೇಶಿ ನಿರ್ಮಿತ ಸಲಕರಣೆಗಳೊಂದಿಗೆ ಸಶಸ್ತ್ರ ಪಡೆಗಳ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಯಿತು. 
ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು
ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು

ನವದೆಹಲಿ: ಭಾರತವು ತನ್ನ 74 ನೇ ಗಣರಾಜ್ಯೋತ್ಸವವನ್ನು ಇಂದು ಗುರುವಾರ ಆಚರಿಸಿಕೊಳ್ಳುತ್ತಿದ್ದು, ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದಲ್ಲಿ ಸ್ವದೇಶಿ ನಿರ್ಮಿತ ಸಲಕರಣೆಗಳೊಂದಿಗೆ ಸಶಸ್ತ್ರ ಪಡೆಗಳ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಯಿತು. 

ಗಣರಾಜ್ಯ ಪರೇಡ್ 2023 ಈಜಿಪ್ಟಿನ ಸಶಸ್ತ್ರ ಪಡೆಗಳ ತಂಡದ ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು. ಭಾರತೀಯ ಸಶಸ್ತ್ರ ಪಡೆಗಳು ದೇಶ ಮತ್ತು ದೇಶವಾಸಿಗಳಿಗೆ ತನ್ನ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿವೆ, ಗಡಿ ನಿಯಂತ್ರಣ ರೇಖೆ (LoC), ನೈಜ ನಿಯಂತ್ರಣ ರೇಖೆ (LAC) ಮತ್ತು ವಿಶ್ವಾದ್ಯಂತ ವಿಶ್ವಸಂಸ್ಥೆ ಶಾಂತಿಪಾಲನಾ ಕಾರ್ಯಾಚರಣೆಗಳ ಮೂಲಕ ಗಡಿಗಳಲ್ಲಿ ಸ್ಥಿರತೆ ಮತ್ತು ಪ್ರಾಬಲ್ಯವನ್ನು ಖಾತ್ರಿಪಡಿಸಿಕೊಳ್ಳುತ್ತಿದೆ.

ಭಾರತೀಯ ಸೇನೆಯ ಮಾರಕತೆ, ನಿಖರತೆ ಮತ್ತು ವಿಶ್ವಾಸಾರ್ಹತೆಯು ಆಕಾಶ ಕ್ಷಿಪಣಿ ವ್ಯವಸ್ಥೆ, ಉಪಗ್ರಹಗಳು, ಮಾಡ್ಯುಲರ್ ಸೇತುವೆಗಳು, ಟವ್ಡ್ ಗನ್‌ಗಳು, ಯುಟಿಲಿಟಿ ಹೆಲಿಕಾಪ್ಟರ್‌ಗಳು, ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆ ಮತ್ತು ಮೇಲ್ಮೈಯಿಂದ ಆಕಾಶಕ್ಕೆ ಕ್ಷಿಪಣಿಗಳಂತಹ ಆಯುಧ, ಶಸ್ತ್ರಾಸ್ತ್ರಗಳನ್ನು ಹೊಂದುವುದರೊಂದಿಗೆ ಮೇಲ್ದರ್ಜೆಗೇರುತ್ತಿದೆ. 

ಈ ವರ್ಷ, ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾರತದ ಸ್ವದೇಶಿ ಉಪಕರಣಗಳು, ಮದ್ದುಗುಂಡುಗಳು, ಶಸ್ತ್ರಾಸ್ತ್ರಗಳ ಪ್ರದರ್ಶನ ಹೈಲೈಟ್ ಆಗಿದೆ. ಮೇಡ್-ಇನ್-ಇಂಡಿಯಾ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಮಾತ್ರ ಪ್ರದರ್ಶಿಸಲಾಯಿತು, ಇದರಲ್ಲಿ 'ಮೇಡ್ ಇನ್ ಇಂಡಿಯಾ' 105 ಎಂಎಂ ಇಂಡಿಯನ್ ಫೀಲ್ಡ್ ಗನ್‌ಗಳ ಮೂಲಕ 21 ಗನ್ ಸೆಲ್ಯೂಟ್ ಸೇರಿದಂತೆ, ಇತ್ತೀಚೆಗೆ ಪರಿಚಯಿಸಲಾದ ಎಲ್‌ಸಿಎಚ್ ಪ್ರಚಂದ್, ಕೆ-9 ವಜ್ರ ಹೊವಿಟ್ಜರ್ಸ್, MBT ಅರ್ಜುನ್, ನಾಗ್ ಆಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿಗಳು, ಆಕಾಶ್ ವಾಯು ರಕ್ಷಣಾ ಕ್ಷಿಪಣಿಗಳು ಮತ್ತು ಕ್ವಿಕ್ ರಿಯಾಕ್ಷನ್ ಫೈಟಿಂಗ್ ವೆಹಿಕಲ್ಸ್ ಗಳು ಸೇರಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com