'ವಾರಕ್ಕೊಮ್ಮೆ ಡಿಜಿಟಲ್ ಉಪವಾಸ ಮಾಡಿ, ಗ್ಯಾಜೆಟ್ ಗಳ ದಾಸರಾಗಬೇಡಿ': ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಕಿವಿಮಾತು
ಪರೀಕ್ಷಾ ಪೇ ಚರ್ಚಾದ ಆರನೇ ಆವೃತ್ತಿಯ ಸಂದರ್ಭದಲ್ಲಿ ಇಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ "ಡಿಜಿಟಲ್ ಉಪವಾಸ" ವನ್ನು ಆಚರಿಸಲು ಸಲಹೆ ನೀಡಿದರು, ಅಂದರೆ ಸ್ಮಾರ್ಟ್ ಫೋನ್, ಡಿಜಿಟಲ್ ಸಾಧನ, ಸೋಷಿಯಲ್ ಮೀಡಿಯಾಗಳಿಂದ ವಾರಕ್ಕೊಮ್ಮೆಯಾದರೂ ದೂರ ಉಳಿಯುವುದು.
Published: 27th January 2023 02:23 PM | Last Updated: 03rd March 2023 02:19 PM | A+A A-

ಪ್ರಧಾನ ಮಂತ್ರಿ ನರೇಂದ್ರ ಮೋದಿ
ನವದೆಹಲಿ: ಪರೀಕ್ಷಾ ಪೇ ಚರ್ಚಾದ ಆರನೇ ಆವೃತ್ತಿಯ ಸಂದರ್ಭದಲ್ಲಿ ಇಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ "ಡಿಜಿಟಲ್ ಉಪವಾಸ" ವನ್ನು ಆಚರಿಸಲು ಸಲಹೆ ನೀಡಿದರು, ಅಂದರೆ ಸ್ಮಾರ್ಟ್ ಫೋನ್, ಡಿಜಿಟಲ್ ಸಾಧನ, ಸೋಷಿಯಲ್ ಮೀಡಿಯಾಗಳಿಂದ ವಾರಕ್ಕೊಮ್ಮೆಯಾದರೂ ದೂರ ಉಳಿಯುವುದು.
ಈ ರೀತಿ ಡಿಜಿಟಲ್ ಉಪವಾಸವು ವಿದ್ಯಾರ್ಥಿಗಳನ್ನು ಕುಟುಂಬ ಸದಸ್ಯರೊಂದಿಗೆ ಬೆರೆಯಲು ಸಹಾಯ ಮಾಡುತ್ತದೆ. ನಾವು ಮನೆಯಲ್ಲಿ ಒಂದು ಸ್ಥಳವನ್ನು ತಂತ್ರಜ್ಞಾನ ವಲಯವಾಗಿ ಇರಿಸಬೇಕು. ನಿಮ್ಮ ಮನೆಯ ಆ ಜಾಗದಲ್ಲಿ ಯಾವುದೇ ತಾಂತ್ರಿಕ ಸಾಧನಗಳನ್ನು ಬಳಸಬೇಡಿ ಎಂದರು.
ಸಾಮಾಜಿಕ ಮಾಧ್ಯಮದಿಂದ ವಿಚಲಿತರಾಗದೆ ಅಧ್ಯಯನದ ಮೇಲೆ ಹೇಗೆ ಗಮನಹರಿಸಬೇಕು ಎಂಬುದರ ಕುರಿತು ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, “ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್‌ಗಳಿಗಿಂತ ಬುದ್ಧಿವಂತರು. ನಾವು ಸ್ಮಾರ್ಟ್ ಫೋನ್ ಎಷ್ಟು ಬಳಸಬೇಕೆಂದು ಯೋಚಿಸಬೇಕು. ನಮ್ಮ ಅಗತ್ಯಕ್ಕೆ ಅನುಗುಣವಾಗಿ ಅದನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಬೇಕು.
ಗ್ಯಾಜೆಟ್‌ಗಳ ದಾಸರಾಗದಂತೆ ವಿದ್ಯಾರ್ಥಿಗಳಿಗೆ ಪ್ರಧಾನಿ ಎಚ್ಚರಿಕೆ ನೀಡಿದರು. ನೀವು ಸ್ವತಂತ್ರ ವ್ಯಕ್ತಿ ಎಂದು ನೀವೇ ಹೇಳಿ, ತಂತ್ರಜ್ಞಾನವನ್ನು ಬಳಸಿಕೊಳ್ಳಿ, ಆದರೆ ಅದಕ್ಕೆ ಮಿತಿಯನ್ನು ಹಾಕಿಕೊಳ್ಳಿ ಎಂದರು.
ದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ ವಿವಿಧೆಡೆಯಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ಸುಮಾರು 2000 ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಭಾಗವಹಿಸಿದ್ದರು, ಅಲ್ಲಿ ಪ್ರಧಾನ ಮಂತ್ರಿಯವರು ಪರೀಕ್ಷೆಯ ಒತ್ತಡವನ್ನು ಹೇಗೆ ಎದುರಿಸುವುದು ಎಂಬುದರ ಕುರಿತು ಸಂವಾದ ನಡೆಸಿದರು. ಈ ವರ್ಷ 38 ಲಕ್ಷಕ್ಕೂ ಹೆಚ್ಚು ನೋಂದಣಿಗಳು ದಾಖಲಾಗಿವೆ.