ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ರಾಗಗಳ ನಿನಾದ
3,500 ದೇಶೀಯ ಡ್ರೋಣ್ ಗಳೊಂದಿಗೆ ದೇಶದ ಅತಿ ದೊಡ್ಡ ಡ್ರೋನ್ ಶೋವನ್ನೊಳಗೊಂಡ ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ಶಾಸ್ತ್ರೀಯ ರಾಗಗಳು ನುಡಿಸಲ್ಪಡುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Published: 28th January 2023 09:01 PM | Last Updated: 28th January 2023 11:03 PM | A+A A-

ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮ
ನವದೆಹಲಿ: 3,500 ದೇಶೀಯ ಡ್ರೋಣ್ ಗಳೊಂದಿಗೆ ದೇಶದ ಅತಿ ದೊಡ್ಡ ಡ್ರೋನ್ ಶೋವನ್ನೊಳಗೊಂಡ ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ಶಾಸ್ತ್ರೀಯ ರಾಗಗಳು ನುಡಿಸಲ್ಪಡುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾನುವಾರದಂದು ವಿಜಯ್ ಚೌಕ್ ಬಳಿ ನಡೆಯಲಿರುವ ವೈಭವೋಪೇತ ಕಾರ್ಯಕ್ರಮದಲ್ಲಿ ಉತ್ತರ ಬ್ಲಾಕ್ ಹಾಗೂ ದಕ್ಷಿಣ ಬ್ಲಾಕ್ ಗಳ ಮುಂಭಾಗದಲ್ಲಿ ಇದೇ ಮೊದಲ ಬಾರಿಗೆ 3-ಡಿ ಅನಾಮಾರ್ಫಿಕ್ ಪ್ರೊಜೆಕ್ಷನ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೀಟಿಂಗ್ ರಿಟ್ರೀಟ್ ಗಣರಾಜ್ಯೋತ್ಸವ ಆಚರಣೆಗೆ ವಿಧ್ಯುಕ್ತ ತೆರೆ ಎಳೆಯಲಿರುವ ಕಾರ್ಯಕ್ರಮವಾಗಿದ್ದು, ಈ ವರ್ಷ ಬೀಟಿಂಗ್ ದಿ ರಿಟ್ರಿಟ್ ನಲ್ಲಿ ಶಾಸ್ತ್ರೀಯ ರಾಗಗಳಿರಲಿವೆ ಎಂದು ಸಚಿವಾಲಯ ಹೇಳಿದೆ. ಈ ಕಾರ್ಯಕ್ರಮದಲ್ಲಿ ಸೇನಾಪಡೆಗಳ ಸುಪ್ರೀಂ ಕಮಾಂಡರ್ ಆಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹ ಭಾಗವಹಿಸಲಿದ್ದಾರೆ.
ಸೇನೆ, ನೌಕಾ ಪಡೆ, ವಾಯುಪಡೆಗಳು ಹಾಗೂ ಪೊಲೀಸ್, ಕೇಂದ್ರ ಸೇನಾ ಪಡೆ (ಸಿಎಪಿಎಫ್) ನಿಂದ 29 ಭಾರತೀಯ ರಾಗಗಳನ್ನು ಬೀಟಿಂಗ್ ರಿಟ್ರಿಟ್ ನಲ್ಲಿ ನುಡಿಸಲಾಗುತ್ತದೆ, ಸಮಾರಂಭದಲ್ಲಿ ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವರೂ ಭಾಗವಹಿಸಲಿದ್ದಾರೆ.