ಹೆಸರು ಬದಲಾಯಿಸುವುದರಿಂದ ದೇಶದ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ: ಮಾಯಾವತಿ
ರಾಷ್ಟ್ರಪತಿ ಭವನದ ಪ್ರಸಿದ್ಧ ‘ಮೊಘಲ್ ಉದ್ಯಾನ’ವನ್ನು 'ಅಮೃತ್ ಉದ್ಯಾನ' ಎಂದು ಮರುನಾಮಕರಣ ಮಾಡಿದ ಒಂದು ದಿನದ ನಂತರ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಭಾನುವಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, 'ಹೆಸರುಗಳನ್ನು ಬದಲಾಯಿಸುವ ಮೂಲಕ ದೇಶದ ಮತ್ತು ಅದರ ಜನರ 'ಸಮಸ್ಯೆಗಳು' ನಿವಾರಣೆಯಾಗುತ್ತವೆಯೇ ಎಂದು ಕೇಳಿದರು.
Published: 29th January 2023 03:01 PM | Last Updated: 29th January 2023 03:01 PM | A+A A-

ಮಾಯಾವತಿ
ಲಖನೌ: ರಾಷ್ಟ್ರಪತಿ ಭವನದ ಪ್ರಸಿದ್ಧ ‘ಮೊಘಲ್ ಉದ್ಯಾನ’ವನ್ನು 'ಅಮೃತ್ ಉದ್ಯಾನ' ಎಂದು ಮರುನಾಮಕರಣ ಮಾಡಿದ ಒಂದು ದಿನದ ನಂತರ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಭಾನುವಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, 'ಹೆಸರುಗಳನ್ನು ಬದಲಾಯಿಸುವ ಮೂಲಕ ದೇಶದ ಮತ್ತು ಅದರ ಜನರ 'ಸಮಸ್ಯೆಗಳು' ನಿವಾರಣೆಯಾಗುತ್ತವೆಯೇ ಎಂದು ಕೇಳಿದರು.
ದೆಹಲಿಯ ರಾಷ್ಟ್ರಪತಿ ಭವನದ ವಿಸ್ತಾರವಾದ ಆವರಣದಲ್ಲಿ ತೋಟಗಾರಿಕಾ ಸ್ವರ್ಗವಾಗಿರುವ ಉದ್ಯಾನ 15 ಎಕರೆಗಳಲ್ಲಿ ಹರಡಿದೆ. 150ಕ್ಕೂ ಹೆಚ್ಚು ಬಗೆಯ ಗುಲಾಬಿಗಳು ಮತ್ತು ಟುಲಿಪ್ಸ್, ಏಷ್ಯಾಟಿಕ್ ಲಿಲ್ಲಿಗಳು, ಡ್ಯಾಫಡಿಲ್‌ಗಳು ಮತ್ತು ಇತರ ಅಲಂಕಾರಿಕ ಹೂವುಗಳನ್ನು ಹೊಂದಿದೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ಮಾಯಾವತಿ, 'ಬೆರಳೆಣಿಕೆಯಷ್ಟು ಜನರನ್ನು ಹೊರತುಪಡಿಸಿ, ದೇಶದ ಎಲ್ಲಾ ಜನರು ಹೆಚ್ಚಿನ ಹಣದುಬ್ಬರ, ಬಡತನ ಮತ್ತು ನಿರುದ್ಯೋಗ ಇತ್ಯಾದಿಗಳಿಂದ ಒತ್ತಡದ ಜೀವನ ನಡೆಸುತ್ತ ಬಳಲುತ್ತಿದ್ದಾರೆ ಮತ್ತು ಈ ಸಮಸ್ಯೆಗಳನ್ನು ಪರಿಹರಿಸುವ ಬದಲು, ಮತಾಂತರ, ಮರುನಾಮಕರಣ, ಬಹಿಷ್ಕಾರ ಮತ್ತು ದ್ವೇಷದ ಭಾಷಣಗಳ ಮೂಲಕ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿರುವುದು ಅನ್ಯಾಯ ಮತ್ತು ದುಃಖಕರ' ಎಂದಿದ್ದಾರೆ.
ಶನಿವಾರ, ಈ ಉದ್ಯಾನಗಳ ಮರುನಾಮಕರಣವು ವಸಾಹತುಶಾಹಿಯ ಮತ್ತೊಂದು ಸಂಕೇತವನ್ನು ಚೂರುಚೂರು ಮಾಡುತ್ತದೆ ಎಂದು ಬಿಜೆಪಿ ಹೇಳಿದರೆ, ವಿರೋಧ ಪಕ್ಷಗಳು ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ಸರ್ಕಾರಕ್ಕೆ ಸಲಹೆ ನೀಡಿವೆ.
ಮತ್ತೊಂದು ಟ್ವೀಟ್ ಮಾಡಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ, 'ರಾಷ್ಟ್ರಪತಿ ಭವನದ ಪ್ರಸಿದ್ಧ ಮೊಘಲ್ ಗಾರ್ಡೆನ್ಸ್‌ನ ಹೆಸರನ್ನು ಬದಲಾಯಿಸಿದರೆ ದೇಶದ ಮತ್ತು ಇಲ್ಲಿನ ಕೋಟ್ಯಂತರ ಜನರ ದಿನನಿತ್ಯದ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲದಿದ್ದರೆ, ಸಾರ್ವಜನಿಕರು ಇದು ತನ್ನ ನ್ಯೂನತೆಗಳು ಮತ್ತು ವೈಫಲ್ಯಗಳನ್ನು ಮುಚ್ಚಿಡಲು ಸರ್ಕಾರದ ಪ್ರಯತ್ನ ಎಂದು ಪರಿಗಣಿಸಿ' ಎಂದು ಅವರು ಹೇಳಿದರು.