ಹಾಕಿ ವಿಶ್ವಕಪ್ ವೈಫಲ್ಯಕ್ಕೆ ಮೊದಲ ತಲೆದಂಡ: ಭಾರತದ ಮುಖ್ಯ ಕೋಚ್ ಸ್ಥಾನಕ್ಕೆ ಗ್ರಹಾಂ ರೀಡ್ ರಾಜೀನಾಮೆ

ಭಾರತೀಯ ಪುರುಷರ ಹಾಕಿ ತಂಡದ ವಿಶ್ವಕಪ್ ವೈಫಲ್ಯಕ್ಕೆ ಮೊದಲ ತಲೆದಂಡವಾಗಿದೆ. ಭಾರತದ ಮುಖ್ಯ ಕೋಚ್ ಸ್ಥಾನಕ್ಕೆ ಗ್ರಹಂ ರೀಡ್ ರಾಜೀನಾಮೆ ನೀಡಿದ್ದಾರೆ. 
ಗ್ರಹಾಂ ರೀಡ್
ಗ್ರಹಾಂ ರೀಡ್

ನವದೆಹಲಿ: ಭಾರತೀಯ ಪುರುಷರ ಹಾಕಿ ತಂಡದ ವಿಶ್ವಕಪ್ ವೈಫಲ್ಯಕ್ಕೆ ಮೊದಲ ತಲೆದಂಡವಾಗಿದೆ. ಭಾರತದ ಮುಖ್ಯ ಕೋಚ್ ಸ್ಥಾನಕ್ಕೆ ಗ್ರಹಂ ರೀಡ್ ರಾಜೀನಾಮೆ ನೀಡಿದ್ದಾರೆ. 

ರೀಡ್ 2019 ರ ಏಪ್ರಿಲ್ ನಲ್ಲಿ ಭಾರತೀಯ ಕೋಚ್ ಆಗಿ ನೇಮಕಗೊಂಡಿದ್ದರು ಹಾಗೂ 2021 ರ ಟೋಕಿಯೋ ಒಲಂಪಿಕ್ಸ್ ನಲ್ಲಿ ತಂಡ ಐತಿಹಾಸಿಕ ಕಂಚು ಪದಕ ಗೆಲ್ಲುವುದಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದರು.
 
ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ 58 ವರ್ಷದ ಆಸ್ಟ್ರೇಲಿಯನ್ ಮೂಲದ ಕೋಚ್ ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟರ್ಕಿಗೆ ರಾಜೀನಾಮೆ ನೀಡಿದ್ದಾರೆ. ರೀಡ್ ಅವರ ಅವಧಿ ಮುಂದಿನ ವರ್ಷದ ಪ್ಯಾರಿಸ್ ಒಲಂಪಿಕ್ಸ್ ವರೆಗೂ ಇತ್ತು. 

ಭುವನೇಶ್ವರದಲ್ಲಿ ನಡೆದ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಜರ್ಮನಿ ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com