ಹರಿಯಾಣ: ಮದುವೆಯಿಂದ ವಾಪಸ್ಸಾಗುತ್ತಿದ್ದವರು ಮಸಣಕ್ಕೆ; ಭೀಕರ ಅಪಘಾತದಲ್ಲಿ ಮೂವರು ಸಾವು, 7 ಮಂದಿಗೆ ಗಾಯ
ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದಾಗ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಮೂವರು ಮೃತಪಟ್ಟು, ಏಳು ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ ರೇವರಿ ಬಳಿ ನಿನ್ನೆ ರಾತ್ರಿ ನಡೆದಿದೆ. ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.
Published: 30th January 2023 07:59 AM | Last Updated: 30th January 2023 07:21 PM | A+A A-

ಅಪಘಾತಗೊಂಡ ಕಾರಿನ ಚಿತ್ರ
ರೆವಾರಿ: ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದಾಗ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಮೂವರು ಮೃತಪಟ್ಟು, ಏಳು ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ ರೇವರಿ ಬಳಿ ನಿನ್ನೆ ರಾತ್ರಿ ನಡೆದಿದೆ. ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.
ಬೆಳಗ್ಗೆ ಮುಂಜಾನೆ 1-30ರ ಸುಮಾರಿನಲ್ಲಿ ಗುಜರ್ ವಾಸ್ ಗ್ರಾಮದ ಬಳಿ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಕಾರಿನ ಇಬ್ಬರು ಚಾಲಕರು ಹಾಗೂ ಪ್ರಯಾಣಿಕನೋರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತರ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕರು ನಿಯಂತ್ರಣ ಕಳೆದುಕೊಂಡು ಈ ಅಪಘಾತ ಸಂಭವಿಸಿದೆ ಎಂದು ಡಿಎಸ್ ಪಿ ಸುಭಾಶ್ ಚಂದ್ರ ತಿಳಿಸಿದ್ದಾರೆ.
Rewari, Haryana | 3 died & 5-6 people were injured in an accident after the collision between two cars near Gujarwas village. The drivers of the cars & an occupant died. Injured admitted to hospital. The drivers had lost balance which led to the accident: Subhash Chand, DSP(29.1) pic.twitter.com/uYFI71b39G
— ANI (@ANI) January 29, 2023
ಅಪಘಾತದಲ್ಲಿ ಗಾಯಗೊಂಡ ಒಬ್ಬರು ಎಎನ್‌ಐಗೆ ತಿಳಿಸಿದರು, ಅವರ ಕಾರಿನ ಚಾಲಕ ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಪ್ರಯತ್ನಿಸಿದ ನಂತರ ಮತ್ತೊಂದು ಕಾರು ವಿರುದ್ಧ ದಿಕ್ಕಿನಿಂದ ವೇಗವಾಗಿ ಅವರ ಕಡೆಗೆ ಹೋಗುತ್ತಿದ್ದರಿಂದ ಅವರು ಮುಖಾಮುಖಿ ಡಿಕ್ಕಿ ಹೊಡೆದರು.
ಮದುವೆ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತ್ತಿದ್ದಾಗ ರುದ್ಧ ದಿಕ್ಕಿನಿಂದ ಅತಿವೇಗದಿಂದ ಬಂದ ಸ್ವಿಫ್ಟ್ ಡಿಜೈರ್ ಬಂದಿತು. ಅಪಘಾತದಿಂದ ಪಾರಾಗಲು ನಮ್ಮ ಕಾರು ಚಾಲಕ ಮಾರ್ಗ ಬದಲಿಸಲು ಯತ್ನಿಸಿದಾಗ ಆತನೂ ಅದೇ ರೀತಿ ಮಾಡಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಗಾಯಾಳು ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.