ಜಾಗತಿಕ ಸವಾಲುಗಳಲ್ಲಿ ಭಾರತದ ನಾಯಕತ್ವ ಮಾದರಿಯಾಗಿದೆ: ಯುಎನ್‌ಜಿಎ ಅಧ್ಯಕ್ಷ ಸಿಸಾಬಾ ಕೊರೊಸಿ
ಜಾಗತಿಕ ಸವಾಲುಗಳಲ್ಲಿ ಭಾರತದ ನಾಯಕತ್ವ ಮಾದರಿಯಾಗಿದ್ದು, ಏಳು ದಶಕಗಳಿಂದ ಭಾರತ ಮತ್ತು ವಿಶ್ವಸಂಸ್ಥೆ ಪರಸ್ಪರ ಕೈಜೋಡಿಸಿ ಪ್ರಯಾಣಿಸಿದೆ ಎಂದು ಯುಎನ್‌ಜಿಎ ಅಧ್ಯಕ್ಷ ಸಿಸಾಬಾ ಕೊರೊಸಿ ಹೇಳಿದ್ದಾರೆ.
Published: 30th January 2023 01:22 PM | Last Updated: 30th January 2023 01:22 PM | A+A A-

ಯುಎನ್‌ಜಿಎ ಅಧ್ಯಕ್ಷ ಸಿಸಾಬಾ ಕೊರೊಸಿ
ನವದೆಹಲಿ: ಜಾಗತಿಕ ಸವಾಲುಗಳಲ್ಲಿ ಭಾರತದ ನಾಯಕತ್ವ ಮಾದರಿಯಾಗಿದ್ದು, ಏಳು ದಶಕಗಳಿಂದ ಭಾರತ ಮತ್ತು ವಿಶ್ವಸಂಸ್ಥೆ ಪರಸ್ಪರ ಕೈಜೋಡಿಸಿ ಪ್ರಯಾಣಿಸಿದೆ ಎಂದು ಯುಎನ್‌ಜಿಎ ಅಧ್ಯಕ್ಷ ಸಿಸಾಬಾ ಕೊರೊಸಿ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ 77ನೇ ವಿಶ್ವಸಂಸ್ಥೆ ಸಾಮಾನ್ಯಸಭೆಯ ಅಧ್ಯಕ್ಷರಾಗಿರುವ ಸಿಸಾಬಾ ಕೊರೊಸಿ ಅವರು, ಉಕ್ರೇನ್-ರಷ್ಯಾ ಯುದ್ದದ 1ನೇ ವಾರ್ಷಿಕೋತ್ಸವವನ್ನು ನಾವು ಸಮೀಪಿಸುತ್ತಿದ್ದೇವೆ. ಈ ಒಂದು ವರ್ಷದಲ್ಲಿ ಪ್ರಪಂಚದಾದ್ಯಂತ ಇಂಧನ ಮತ್ತು ಆಹಾರ ಬಿಕ್ಕಟ್ಟನ್ನು ಬಿಚ್ಚಿಟ್ಟ ಯುದ್ಧ ಇದಾಗಿದೆ. ಉಕ್ರೇನ್ ಮತ್ತು ಪ್ರಪಂಚದಾದ್ಯಂತ ಶಾಂತಿಗಾಗಿ ನೀಡಿದ ಕರೆಗಳಿಗಾಗಿ ನಾನು ಭಾರತವನ್ನು ಶ್ಲಾಘಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜಾಗತಿಕ ಆರ್ಥಿಕತೆಯಲ್ಲಿ ಈಗ ಭಾರತವೇ ಆಶಾಕಿರಣ: ವಿಶ್ವಸಂಸ್ಥೆಯ ಟಾಪ್ ಅರ್ಥಶಾಸ್ತ್ರಜ್ಞ
ಅಂತೆಯೇ ಕೊರೋನಾ ಸಾಂಕ್ರಾಮಿಕ ಸಂಕಷ್ಟ ಸಂದರ್ಭದಲ್ಲಿ 150 ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆಗಳನ್ನು ರಫ್ತು ಮಾಡುವ ನಿಮ್ಮ ಉದಾರತೆಗಾಗಿ ನಾನು ಭಾರತವನ್ನು ಶ್ಲಾಘಿಸುತ್ತೇನೆ ಮತ್ತು ನಿಮ್ಮ G20 ಚೈಮನ್‌ಶಿಪ್ (ನಾಯಕತ್ವ) ಮೂಲಕ ಸುಸ್ಥಿರ ಚೇತರಿಕೆ ಸಾಧಿಸುವಲ್ಲಿ ಯಶಸ್ವಿಯಾಗಿದ್ದೀರಿ ಎಂದು ಭಾರತವನ್ನು ಕೊರೊಸಿ ಶ್ಲಾಘಿಸಿದ್ದಾರೆ.
India's leadership on global challenges has been exemplary. For seven decades, India and the UN have travelled hand in hand. India is one of the largest contributors of troops to peacekeeping: Csaba Korosi, President, 77th UN General Assembly (UNGA), in Delhi pic.twitter.com/KPMcbp81q9
— ANI (@ANI) January 30, 2023
ಅಲ್ಲದೆ ಜಾಗತಿಕ ಸವಾಲುಗಳಲ್ಲಿ ಭಾರತದ ನಾಯಕತ್ವ ಅನುಕರಣೀಯವಾಗಿದೆ ಎಂದು ಹೇಳಿರುವ ಕೊರೊಸಿ, ಏಳು ದಶಕಗಳಿಂದ ಭಾರತ ಮತ್ತು ವಿಶ್ವಸಂಸ್ಥೆ ಪರಸ್ಪರ ಕೈಜೋಡಿಸಿ ಪ್ರಯಾಣಿಸಿದೆ. ಭಾರತವು ಶಾಂತಿಪಾಲನೆಗೆ ಪಡೆಗಳ ಅತಿದೊಡ್ಡ ಕೊಡುಗೆದಾರರಲ್ಲಿ ಒಂದಾಗಿದೆ ಎಂದು ಬಣ್ಣಿಸಿದ್ದಾರೆ.