ಮೋದಿ-2002 ಗಲಭೆ ಕುರಿತ ಬಿಬಿಸಿ ಡಾಕ್ಯುಮೆಂಟರಿ ಕುರಿತು ರಷ್ಯಾ ಹೇಳಿದ್ದೇನು ಅಂದರೆ...
ಪ್ರಧಾನಿ ಮೋದಿ ಹಾಗೂ ಗುಜರಾತ್ ನಲ್ಲಿ 2002 ರಲ್ಲಿ ಸಂಭವಿಸಿದ ಗಲಭೆ ಕುರಿತು ವಿವಾದಾತ್ಮಕ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿರುವ ಬಿಬಿಸಿ ಬಗ್ಗೆ ರಷ್ಯಾ ಪ್ರತಿಕ್ರಿಯೆ ನೀಡಿದೆ.
Published: 30th January 2023 08:55 PM | Last Updated: 31st January 2023 06:59 PM | A+A A-

ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ
ಮಾಸ್ಕೋ: ಪ್ರಧಾನಿ ಮೋದಿ ಹಾಗೂ ಗುಜರಾತ್ ನಲ್ಲಿ 2002 ರಲ್ಲಿ ಸಂಭವಿಸಿದ ಗಲಭೆ ಕುರಿತು ವಿವಾದಾತ್ಮಕ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿರುವ ಬಿಬಿಸಿ ಬಗ್ಗೆ ರಷ್ಯಾ ಪ್ರತಿಕ್ರಿಯೆ ನೀಡಿದೆ.
ಬಿಬಿಸಿ ರಷ್ಯಾ ಮಾತ್ರವಲ್ಲದೇ ಸ್ವತಂತ್ರ ನೀತಿಗಳನ್ನು ಅನುಸರಿಸುತ್ತಿರುವ ಜಾಗತಿಕ ಮಟ್ಟದ ಶಕ್ತಿ ಕೇಂದ್ರಗಳ ವಿರುದ್ಧವೂ ಬಿಬಿಸಿ ಮಾಹಿತಿ ಯುದ್ಧ ಸಾರುತ್ತಿದೆ ಎಂದು ಮೋದಿ ಕುರಿತ ವಿವಾದಿತ ಡಾಕ್ಯುಮೆಂಟರಿಗೆ ರಷ್ಯಾ ಪ್ರತಿಕ್ರಿಯೆ ನೀಡಿದೆ.
ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಅವರು ಬಿಬಿಸಿಯ ವಿವಾದಿತ ಡಾಕ್ಯುಮೆಂಟರಿಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮ ಭಾರತೀಯ ಸ್ನೇಹಿತರು ಈಗಾಗಲೇ ಈ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಿಬಿಸಿ ವಿವಿಧ ರೀತಿಗಳಲ್ಲಿ ವಿವಿಧ ರಂಗಗಳಲ್ಲಿ ರಷ್ಯಾ ಮಾತ್ರವಲ್ಲದೇ ಸ್ವತಂತ್ರ ನೀತಿಗಳನ್ನು ಅನುಸರಿಸುತ್ತಿರುವ ಜಾಗತಿಕ ಮಟ್ಟದ ಶಕ್ತಿ ಕೇಂದ್ರಗಳ ವಿರುದ್ಧ ಮಾಹಿತಿ ಯುದ್ಧವನ್ನು ನಡೆಸುತ್ತಿದೆ ಎಂದು ವರದಿಗಾರರಿಗೆ ಹೇಳಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಒಡಕು ಮೂಡಿಸುವ ಪ್ರಯತ್ನಗಳಾಗುತ್ತಿವೆ: ಬಿಬಿಸಿ ಸಾಕ್ಷ್ಯಚಿತ್ರದ ವಿರುದ್ಧ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ
ಕೆಲವು ವರ್ಷಗಳ ನಂತರ ಬಿಬಿಸಿ ಬ್ರಿಟೀಷ್ ಸಂಸ್ಥೆಗಳ ವಿರುದ್ಧವೇ ಬಿಬಿಸಿ ಸಂಘರ್ಷಕ್ಕೆ ಇಳಿದಿದ್ದು, ಗುಂಪುಗಳ ನಡುವೆ ಹಿತಾಸಕ್ತಿಯ ದಾಳವಾಗಿ ಬಿಬಿಸಿ ವರ್ತಿಸುತ್ತಿದೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ಬಿಬಿಸಿಯೆಡೆಗೆ ಅದು ಹೇಗೆ ಇದೆಯೋ ಅದರಂತೆಯೇ ವರ್ತಿಸಬೇಕು. ಬಿಬಿಸಿ ಸ್ವಾಯತ್ತ ಟಿವಿ ಹಾಗೂ ರೇಡಿಯೋ ಕಾರ್ಪೊರೇಷನ್ ಅಲ್ಲ ಆದರೆ ಅವಲಂಬಿತ ಸಂಸ್ಥೆಯಾಗಿದ್ದು ಪತ್ರಿಕೋದ್ಯಮ ವೃತ್ತಿಯ ಮೂಲಭೂತ ಅವಶ್ಯಕತೆಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ಬಿಬಿಸಿ ಡಾಕ್ಯುಮೆಂಟರಿ ವಿಚಾರದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪ್ರಧಾನಿ ಮೋದಿ ಅವರನ್ನು ಸಮರ್ಥಿಸಿಕೊಂಡಿದ್ದರು ಅಷ್ಟೇ ಅಲ್ಲದೇ ಬಿಬಿಸಿ ಸಾಕ್ಷ್ಯಚಿತ್ರವನ್ನು ಒಪ್ಪುವುದಿಲ್ಲ ಎಂದು ಹೇಳಿದ್ದರು.