ತ್ರಿಪುರಾದಲ್ಲಿ ಆಪರೇಷನ್ ಲೋಟಸ್: ಮತ್ತೆ ಐಪಿಎಫ್ ಟಿ-ಬಿಜೆಪಿ ಮೈತ್ರಿ, ಟಿಐಪಿಆರ್ ಎ ಮೋತಾಗೆ ಚೆಕ್ ಮೇಟ್

ಬಿಜೆಪಿ ತ್ರಿಪುರಾದಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದು, ಐಪಿಎಫ್ ಟಿ ಜೊತೆ ಮತ್ತೆ ಮೈತ್ರಿ ಮಾಡಿಕೊಂಡಿದೆ. ಈ ಮೂಲಕ ಟಿಐಪಿಆರ್ ಎ ಮೋತಾ ಪಕ್ಷ ಐಪಿಎಫ್ ಟಿ ಜೊತೆ ಮೈತ್ರಿ ಮಾಡಿಕೊಳ್ಳುವುದನ್ನು ತಪ್ಪಿಸಿದೆ.
ಬಿಜೆಪಿ ಲೋಗೋ
ಬಿಜೆಪಿ ಲೋಗೋ

ಗುವಾಹಟಿ: ಬಿಜೆಪಿ ತ್ರಿಪುರಾದಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದು, ಐಪಿಎಫ್ ಟಿ ಜೊತೆ ಮತ್ತೆ ಮೈತ್ರಿ ಮಾಡಿಕೊಂಡಿದೆ. ಈ ಮೂಲಕ ಟಿಐಪಿಆರ್ ಎ ಮೋತಾ ಪಕ್ಷ ಐಪಿಎಫ್ ಟಿ ಜೊತೆ ಮೈತ್ರಿ ಮಾಡಿಕೊಳ್ಳುವುದನ್ನು ತಪ್ಪಿಸಿದೆ.

ಫೆ.16 ರಂದು ತ್ರಿಪುರಾ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಸ್ವರಾಜ್ಯ ಮ್ಯಾಗಜೀನ್ ನ ಮಾಹಿತಿಯ ಪ್ರಾಕರ,  ಬಿಜೆಪಿ ಟಿಐಪಿಆರ್ ಪಕ್ಷವನ್ನು ಬದಿಗಿರಿಸಿ ನಾಟಕೀಯ ಬೆಳವಣಿಗೆಯಲ್ಲಿ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್ ಟಿ) ಜೊತೆಗೆ ಮತ್ರಿಯನ್ನು ಮರು ಸ್ಥಾಪಿಸಿದೆ.

ಬುಡಕಟ್ಟು ಮತಗಳು ವಿಭಜನೆಯಾಗುವುದನ್ನು ತಡೆಗಟ್ಟಲು ಹಾಗೂ ಬಿಜೆಪಿಯನ್ನು ದೂರ ಇಡಲು ಟಿಐಪಿಆರ್ ಎ ಮುಖ್ಯಸ್ಥ ಹಾಗೂ ರಾಜವಂಶಸ್ಥ ಪ್ರದ್ಯೋತ್ ಮಾಣಿಕ್ಯ ದೆಬ್ಬರ್ಮ ಐಪಿಎಫ್ ಟಿ ತಮ್ಮ ಪಕ್ಷದೊಂದಿಗೆ ವಿಲೀನ ಮಾಡಿಕೊಳ್ಳಲು ಯತ್ನಿಸಿದ್ದರು. ಇದರ ಭಾಗವಾಗಿ ಆತ ಇತ್ತೀಚೆಗೆ ಐಪಿಎಫ್ ಟಿ ನಾಯಕರೊಂದಿಗೆ ಸಭೆ ನಡೆಸಿದ್ದರು.

ಈ ಸಭೆಯ ಬಳಿಕ ಹೊರಬಂದ ವೀಡಿಯೋ ಮೆಸೇಜ್ ನಲ್ಲಿ ಎರಡೂ ಪಕ್ಷಗಳು ವಿಲೀನಗೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲು ಎರಡೂ ಪಕ್ಷಗಳು ಒಪ್ಪಿಗೆ ಸೂಚಿಸಿವೆ. ಸಾಂವಿಧಾನಿಕ ಬೇಡಿಕೆಯ ವಿರುದ್ಧ ಇರುವವರ ವಿರುದ್ಧ ಚುನಾವಣೆ ಎದುರಿಸಲು ಈ ವಿಲೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದರು. ಬಿಜೆಪಿ ಈ ರಾಜ್ಯದಲ್ಲಿ ತೀವ್ರ ಪೈಪೋಟಿ ಎದುರಿಸುತ್ತಿದ್ದು  ಚುನಾವಣಾ ಪೂರ್ವ ಮೈತ್ರಿಗೆ ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com