
(ಸಾಂಕೇತಿಕ ಚಿತ್ರ)
ಚೆನ್ನೈ: ದೇವಾಲಯ ಪ್ರವೇಶಿಸಿದ ದಲಿತನನ್ನು ಡಿಎಂಕೆ ಪಕ್ಷದ ಕಾರ್ಯಕರ್ತ ನಿಂದಿಸಿರುವುದು ವೀಡಿಯೋದಲ್ಲಿ ದಾಖಲಾಗಿದ್ದು ಆತನನ್ನು ಪಕ್ಷ ಅಮಾನತುಗೊಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಸೇಲಮ್ ದಕ್ಷಿಣ ಯೂನಿಯನ್ ಕಾರ್ಯದರ್ಶಿ ಟಿ ಮಾಣಿಕಮ್, ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ನಿಂದಿಸುತ್ತಿರುವುದು ಸ್ಪಷ್ಟವಾಗಿ ಕೇಳಿದೆ.
ದಲಿತ ಯುವಕ ಪ್ರವೇಶಿಸಿದ ದೇವಾಲಯ ತಮಿಳುನಾಡಿನ ಹಿಂದೂ ಧಾರ್ಮಿಕ ಹಾಗೂ ದತ್ತಿ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿದೆ.
ಮಾಣಿಕಂ ಯುವಕನ ತಂದೆಯನ್ನೂ ನಿಂದಿಸಿದ್ದಾರೆ. ಅವರ ಪೈಕಿ ಅರ್ಧದಷ್ಟು ಮಂದಿಗೆ ದೇವಾಲಯಕ್ಕೆ ಬರುವುದಕ್ಕೆ ಇಷ್ಟವಿಲ್ಲ. ನಾನು ಉದ್ಯೋಗಗಳನ್ನು ಸುರಕ್ಷಿತಗೊಳಿಸುವುದಕ್ಕೆ ಯತ್ನಿಸುತ್ತಿದ್ದರೆ, ನೀವು ಒಳಗೇ ಕೆಲಸ ಮಾಡುತ್ತೀರಿ ಎಂದು ಮಾಣಿಕಮ್ ಹೇಳಿರುವುದು ವೀಡಿಯೋದಲ್ಲಿ ದಾಖಲಾಗಿದೆ.
ಡಿಎಂಕೆ ಪ್ರಧಾನ ಕಾರ್ಯದರ್ಶಿ ದುರೈ ಮುರುಗನ್ ಮಾಣಿಕಂ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಕ್ಕಾಗಿ ಅಮಾನತುಗೊಳಿಸಿರುವುದಾಗಿ ಹೇಳಿದ್ದಾರೆ.
ಬಿಜೆಪಿ ರಾಜ್ಯಘಟಕದ ಮುಖ್ಯಸ್ಥರಾಗಿರುವ ಅಣ್ಣಾಮಲೈ, ಈ ನಡುವೆ ಟ್ವೀಟ್ ಮಾಡಿದ್ದು ನೆನ್ನೆ ಡಿಎಂಕೆ ಸಂಸದರೊಬ್ಬರು ದೇವಾಲಯ ಕೆಡವಿದ್ದರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು ಹಾಗೂ ಇಂದು ಡಿಎಂಕೆ ಕಾರ್ಯಕರ್ತರೊಬ್ಬರು ದಲಿತ ಸಮುದಾಯದ ನಮ್ಮ ಸಹೋದರ/ ಸಹೋದರಿಯರು ದೇವಾಲಯ ಪ್ರವೇಶಿಸುವುದನ್ನು ತಡೆಯುತ್ತಿದ್ದಾರೆ. ಇದು ಡಿಎಂಕೆಯ ಸಾಮಾಜಿಕ ನ್ಯಾಯದ ಮಾದರಿ ಎಂದು ಹೇಳಿದ್ದಾರೆ.