ಇಂದು ಆರ್ಥಿಕ ಸಮೀಕ್ಷೆ ವರದಿ ಮಂಡನೆ: 2023-24 ರ ಬೆಳವಣಿಗೆ 3 ವರ್ಷಗಳಲ್ಲೇ ನಿಧಾನಗತಿಯ ಉಲ್ಲೇಖ ಸಾಧ್ಯತೆ
ಫೆ.01 ರಂದು 2023-24 ನೇ ಸಾಲಿನ ಬಜೆಟ್ ಮಂಡನೆಯಾಗಲಿದ್ದು, ಇದಕ್ಕೂ ಮುನ್ನ ಪ್ರಕಟಗೊಳ್ಳಲಿರುವ್ ಭಾರತದ ವಾರ್ಷಿಕ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯತ್ತ ಹೆಚ್ಚು ಕುತೂಹಲ ಮೂಡಿದೆ.
Published: 31st January 2023 01:01 AM | Last Updated: 31st January 2023 01:30 PM | A+A A-

ಭಾರತದ ಆರ್ಥಿಕ ಸಮೀಕ್ಷೆ
ನವದೆಹಲಿ: ಫೆ.01 ರಂದು 2023-24 ನೇ ಸಾಲಿನ ಬಜೆಟ್ ಮಂಡನೆಯಾಗಲಿದ್ದು, ಇದಕ್ಕೂ ಮುನ್ನ ಪ್ರಕಟಗೊಳ್ಳಲಿರುವ್ ಭಾರತದ ವಾರ್ಷಿಕ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯತ್ತ ಹೆಚ್ಚು ಕುತೂಹಲ ಮೂಡಿದೆ.
ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆ ಭಾರತದ ಜಿಡಿಪಿ ಬೆಳವಣಿಗೆಯನ್ನು 2023-24 ನೇ ವರ್ಷಕ್ಕೆ ಶೇ.6-6.8 ರಷ್ಟು ಅಂದಾಜಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈಗಿನ ಸನ್ನಿವೇಶದಲ್ಲಿ ಸರ್ಕಾರ ಬೆಳವಣಿಗೆಯ ದರವನ್ನು ಪ್ರಸಕ್ತ ಸಾಲಿನಲ್ಲಿ ಶೇ.6.5 ರ ಆಸುಪಾಸಿನಲ್ಲಿ ನೋಡುತ್ತಿರುವುದಾಗಿ ಸರ್ಕಾರಿ ಸಮೀಕ್ಷೆ ಹೇಳುವ ಸಾಧ್ಯತೆಗಳಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಜಾಗತಿಕ ಆರ್ಥಿಕತೆಯಲ್ಲಿ ಈಗ ಭಾರತವೇ ಆಶಾಕಿರಣ: ವಿಶ್ವಸಂಸ್ಥೆಯ ಟಾಪ್ ಅರ್ಥಶಾಸ್ತ್ರಜ್ಞ
ಈ ಬೆಳವಣಿಗೆ ದರ ಮೂರು ವರ್ಷಗಳಲ್ಲೇ ಅತ್ಯಂತ ನಿಧಾನಗತಿಯದ್ದಾಗಿರಲಿದೆ 2023-24 ರ ಸಾಲಿನಲ್ಲಿ ನಾಮಿನಲ್ ಬೆಳವಣಿಗೆ ಶೇ.11 ರಷ್ಟು ಇರಲಿದೆ ಎಂದು ಅಂದಾಜಿಸಲಾಗುತ್ತಿದೆ.
ಸ್ಥಿರವಾದ ಬಳಕೆ, ಕಾರ್ಪೊರೇಷನ್ ಗಳಿಂದ ಬಂಡವಾಳ ಖರ್ಚಿನಲ್ಲಿ ಸುಧಾರಣೆ ಹಾಗೂ ಬ್ಯಾಂಕುಗಳು ಸಾಲ ನೀಡುತ್ತಿರುವುದರಲ್ಲಿನ ಚೇತರಿಕೆಯ ಪರಿಣಾಮಗಳಿಂದ ಉಳಿದ ಜಾಗತಿಕ ಆರ್ಥಿಕತೆಗಳಿಗೆ ಹೋಲಿಕೆ ಮಾಡಿದಲ್ಲಿ, ಏ.1 ರಿಂದ ಪ್ರಾರಂಭವಾಗಲಿರುವ ಹೊಸ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಸ್ಥಿರ, ಬಲಿಷ್ಠವಾಗಿರಲಿದೆ ಎಂದು ಸಮೀಕ್ಷೆಯಲ್ಲಿ ಸರ್ಕಾರ ಹೇಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ಬಜೆಟ್ 2023: ತೆರಿಗೆ ಕುರಿತು ಸ್ಪಷ್ಟತೆ, ಟಿಡಿಎಸ್ ಕಡಿತಕ್ಕೆ ಕ್ರಿಪ್ಟೋ ಉದ್ಯಮದ ಬೇಡಿಕೆ
ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್ ಅವರ ಆರ್ಥಿಕ ಸಮೀಕ್ಷೆಯನ್ನು ಮಾ.31 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ ನಲ್ಲಿ ಮಂಡಿಸಲಿದ್ದಾರೆ.