ಫೆ.12 ರಂದು ಕೆಲವು ಗಂಟೆಗಳ ಕಾಲ ತಾಜ್ ಮಹಲ್, ಆಗ್ರಾ ಕೋಟೆ ಬಂದ್!
ಜಿ-20 ರಾಷ್ಟ್ರಗಳಿಂದ ಪ್ರತಿನಿಧಿಗಳು ಆಗ್ರಾಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಫೆ.12 ರಂದು ಆಗ್ರಾ ಕೋಟೆ ಹಾಗೂ ತಾಜ್ ಮಹಲ್ ನ್ನು ಕೆಲವು ಗಂಟೆಗಳ ಕಾಲ ಬಂದ್ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published: 31st January 2023 02:58 AM | Last Updated: 31st January 2023 02:58 AM | A+A A-

ತಾಜ್ ಮಹಲ್ (ಪಿಟಿಐ ಚಿತ್ರ)
ನವದೆಹಲಿ: ಜಿ-20 ರಾಷ್ಟ್ರಗಳಿಂದ ಪ್ರತಿನಿಧಿಗಳು ಆಗ್ರಾಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಫೆ.12 ರಂದು ಆಗ್ರಾ ಕೋಟೆ ಹಾಗೂ ತಾಜ್ ಮಹಲ್ ನ್ನು ಕೆಲವು ಗಂಟೆಗಳ ಕಾಲ ಬಂದ್ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂದಾಜು 4 ಗಂಟೆಗಳಿಗೂ ಹೆಚ್ಚಿನ ಸಮಯ ಈ ಎರಡೂ ಪ್ರದೇಶಗಳನ್ನು ಬಂದ್ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಆಗ್ರಾದಲ್ಲಿ ಜಿ-20 ಸಭೆಗೆ ಪ್ರತಿನಿಧಿಗಳನ್ನು ಸ್ವಾಗತಿಸಲು ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಜಿಲ್ಲಾಧಿಕಾರಿ ನವನೀತ್ ಸಿಂಗ್ ಚಹಾಲ್ ತಿಳಿಸಿದ್ದಾರೆ.
ವಿದೇಶಾಂಗ ಸಚಿವಾಲಯದ ಸಚಿವಾಲಯದಿಂದ ಲಭ್ಯವಿರುವ ವೇಳಾಪಟ್ಟಿಯ ಪ್ರಕಾರ ಈ ವರೆಗೂ ಆಗ್ರಾದಲ್ಲಿ ಜಿ-20 ಸಭೆ ನಿಗದಿಯಾಗಿಲ್ಲ. ಆದರೆ ಜಿ-20 ಕಾರ್ಯನಿರತ ಗುಂಪು ಸಭೆಗಳು ಇಂಡೋರ್, ಬೆಂಗಳೂರು, ಲಖನೌಗಳಲ್ಲಿ ನಡೆಯಲಿದೆ ಹಾಗೂ ಪ್ರತಿನಿಧಿಗಳು ಆಗ್ರಾಗೆ ಭೇಟಿ ನೀಡುವ ಸಾಧ್ಯತೆಗಳಿವೆ.
ಫೆ.12 ರಂದು ವಿದೇಶಿ ಪ್ರತಿನಿಧಿಗಳು ಭೇಟಿ ನೀಡುತ್ತಿದ್ದು ತಾಜ್ ಮಹಲ್ ಹಾಗೂ ಆಗ್ರಾ ಕೋಟೆ ಸಾರ್ವಜನಿಕರ ವೀಕ್ಷಣೆಗೆ 3-4 ಗಂಟೆಗಳ ಕಾಲ ಲಭ್ಯವಿರುವುದಿಲ್ಲ, ಸಾರ್ವಜನಿಕರ ಹಿತದೃಷ್ಟಿಯಿಂದ ಈ ಮಾಹಿತಿಯನ್ನು ಮುಂಚೆಯೇ ನೀಡುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶದ ಪ್ರಧಾನ ಕಾರ್ಯದರ್ಶಿ ಅಮೃತ್ ಅಭಿಜತ್ ಅವರೂ ಆಗ್ರಾ ಹಾಗೂ ಅಲ್ಲಿನ ಏರ್ ಪೋರ್ಟ್ ನ್ನು ಪರಿಶೀಲನೆ ನಡೆಸಿದ್ದರು.