ಶೈಕ್ಷಣಿಕ ಪಠ್ಯಕ್ರಮದಿಂದ ಕಾರ್ಗಿಲ್ ಅಧ್ಯಾಯ ತೆಗೆದ ಕಾಂಗ್ರೆಸ್ ಸರ್ಕಾರದ ದೇಶಭಕ್ತಿ ಎಂಥದ್ದು: ಜೆಪಿ ನಡ್ಡಾ
ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಶಹದೋಲ್ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸುವ ಒಂದು ದಿನಕ್ಕೂ ಮುನ್ನ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಶುಕ್ರವಾರ ಅದೇ ವಿಧಾನಸಭಾ ಕ್ಷೇತ್ರದ ರಾಜ್ಯದ ಮತ್ತೊಂದು ಬುಡಕಟ್ಟು ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.
Published: 01st July 2023 11:12 AM | Last Updated: 01st July 2023 06:59 PM | A+A A-

ಜೆಪಿ ನಡ್ಡಾ
ನವದೆಹಲಿ: ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಶಹದೋಲ್ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸುವ ಒಂದು ದಿನಕ್ಕೂ ಮುನ್ನ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಶುಕ್ರವಾರ ಅದೇ ವಿಧಾನಸಭಾ ಕ್ಷೇತ್ರದ ರಾಜ್ಯದ ಮತ್ತೊಂದು ಬುಡಕಟ್ಟು ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.
ನಡ್ಡಾ ಅವರು ನೈರುತ್ಯ ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಖಾರ್ಗೋನ್ ಜಿಲ್ಲೆಯಲ್ಲಿ ರೋಡ್‌ಶೋ ನಡೆಸಿದರು ಮತ್ತು ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.
ಅದೇ ಕಾರ್ಯಕ್ರಮದಲ್ಲಿ, ಮಧ್ಯ ಪ್ರದೇಶದ ಮಾಜಿ ಸಚಿವ ಮತ್ತು ಮಹೇಶ್ವರ-ಎಸ್‌ಸಿ ಸ್ಥಾನದಿಂದ ಐದನೇ ಬಾರಿಗೆ ಹಾಲಿ ಶಾಸಕಿ ಡಾ. ವಿಜಯಲಕ್ಷ್ಮಿ ಸಾಧೋ ಅವರ ಸಹೋದರಿ ಪ್ರಮೀಳಾ ಸಾಧೋ ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡರು.
ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ನಡ್ಡಾ, 15 ತಿಂಗಳ ಹಿಂದಿನ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಆಡಳಿತವನ್ನು ಭ್ರಷ್ಟ ಸರ್ಕಾರ ಎಂದು ಬಣ್ಣಿಸಿದರು. 'ಆ ಆಡಳಿತವು ಎಷ್ಟು ದೇಶಭಕ್ತಿಯಿಂದ ಕೂಡಿತ್ತು ಎಂದು ನಿಮಗೆ ತಿಳಿದಿದೆಯೇ?. ಇದು ಮಧ್ಯಪ್ರದೇಶದ ಶೈಕ್ಷಣಿಕ ಪಠ್ಯಕ್ರಮದಿಂದ ಕಾರ್ಗಿಲ್ ಅಧ್ಯಾಯವನ್ನು ತೆಗೆದುಹಾಕಿತು. ಇದು ನಮ್ಮ ರಕ್ಷಣಾ ಪಡೆಗಳಿಗೆ ಮಾಡಿದ ದೊಡ್ಡ ಅವಮಾನ. ಆದರೆ, ಅವರು (ಕಾಂಗ್ರೆಸ್) ಮೋದಿ ಸರ್ಕಾರವು ಎಲ್ಒಸಿಯಾದ್ಯಂತ ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ಗಳ ಸಾಕ್ಷ್ಯವನ್ನು ಕೇಳಿದರು ಎಂದು ದೂರಿದರು.