ನಾಳೆ ಮಹಾ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ: ಶಿವಸೇನೆ
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಶುಕ್ರವಾರ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿ, ಖಾತೆಗಳನ್ನು ಹಂಚಿಕೆ ಮಾಡುವ ಸಾಧ್ಯತೆಯಿದೆ ಎಂದು ಗುರುವಾರ ಆಡಳಿತರೂಢ ಶಿವಸೇನೆ ಹೇಳಿದೆ. ಆದರೆ ಪಕ್ಷದ ಪ್ರತಿಸ್ಪರ್ಧಿ ಬಣ...
Published: 13th July 2023 09:13 PM | Last Updated: 14th July 2023 01:51 PM | A+A A-

ಏಕನಾಥ್ ಶಿಂಧೆ ಮತ್ತು ದೇವೇಂದ್ರ ಫಡ್ನವೀಸ್
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಶುಕ್ರವಾರ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿ, ಖಾತೆಗಳನ್ನು ಹಂಚಿಕೆ ಮಾಡುವ ಸಾಧ್ಯತೆಯಿದೆ ಎಂದು ಗುರುವಾರ ಆಡಳಿತರೂಢ ಶಿವಸೇನೆ ಹೇಳಿದೆ. ಆದರೆ ಪಕ್ಷದ ಪ್ರತಿಸ್ಪರ್ಧಿ ಬಣ, ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ಸೇರಿದ ಶಾಸಕರಿಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎಂದಿದೆ.
ಜುಲೈ 2 ರಂದು, ಎನ್‌ಸಿಪಿ ನಾಯಕ ಅಜಿತ್ ಪವಾರ್ ಮತ್ತು ಅವರ ಪಕ್ಷದ ಇತರ ಎಂಟು ಶಾಸಕರು ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಅಚ್ಚರಿಯ ನಡೆ ಶರದ್ ಪವಾರ್ ನೇತೃತ್ವದ ಪಕ್ಷ ವಿಭಜನೆಗೆ ಕಾರಣವಾಯಿತು.
ಇದನ್ನು ಓದಿ: ಪ್ರಧಾನಿ ಮೋದಿಗೆ ಲೋಕಮಾನ್ಯ ತಿಲಕ್ ಪ್ರಶಸ್ತಿ; ಶರದ್ ಪವಾರ್ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಅಜಿತ್ ಪವಾರ್
ನಾಳೆ ಸಂಪುಟ ವಿಸ್ತರಣೆ ಮತ್ತು ಖಾತೆಗಳ ಹಂಚಿಕೆ ಆಗುವ ಸಾಧ್ಯತೆಯಿದೆ ಎಂದು ಆಡಳಿತಾರೂಢ ಶಿವಸೇನೆ ವಕ್ತಾರ ಸಂಜಯ್ ಶಿರ್ಸತ್ ಅವರು ಹೇಳಿದ್ದಾರೆ.
ಈ ಬಾರಿ ಶಿಂಧೆ ನೇತೃತ್ವದ ಪಕ್ಷದ ಶಾಸಕರು ಸಂಪುಟದಲ್ಲಿ ಸ್ಥಾನ ಪಡೆಯುವುದು ಅನುಮಾನ ಎಂದು ಶಿವಸೇನೆ(ಯುಬಿಟಿ) ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದೆ.