ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಟ್ಯಾಗ್ ಲೈನ್ 'ಜೀತೇಗಾ ಭಾರತ್'
2024ರ ಲೋಕಸಭೆ ಚುನಾವಣೆಗೆ ಮುನ್ನಿಡಿಯಾಗಿ ರಾಷ್ಟ್ರ ಮಟ್ಟದಲ್ಲಿ ವಿರೋಧ ಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ 'ಇಂಡಿಯಾ' ಹೆಸರನ್ನು ಘೋಷಿಸಿದ ಒಂದು ದಿನದ ನಂತರ, "ಜೀತೇಗ ಭಾರತ" ಎಂಬ ಅಡಿಬರಹವನ್ನು ಶೀರ್ಷಿಕೆಗೆ ನೀಡಿದ್ದಾರೆ.
Published: 19th July 2023 12:53 PM | Last Updated: 19th July 2023 08:54 PM | A+A A-

ಇಂಡಿಯಾ ಮೈತ್ರಿಕೂಟಕ್ಕೆ ಟ್ಯಾಗ್ ಲೈನ್
ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಮುನ್ನಿಡಿಯಾಗಿ ರಾಷ್ಟ್ರ ಮಟ್ಟದಲ್ಲಿ ವಿರೋಧ ಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ 'ಇಂಡಿಯಾ' ಹೆಸರನ್ನು ಘೋಷಿಸಿದ ಒಂದು ದಿನದ ನಂತರ, "ಜೀತೇಗ ಭಾರತ" ಎಂಬ ಅಡಿಬರಹವನ್ನು ಶೀರ್ಷಿಕೆಗೆ ನೀಡಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ, ಮೈತ್ರಿ ಹೆಸರಿನಲ್ಲಿ “ಭಾರತ್” ಎಂಬ ಪದ ಒಳಗೊಂಡಿರಬೇಕು ಎಂದು ಹಲವಾರು ನಾಯಕರು ಅಭಿಪ್ರಾಯಪಟ್ಟರು.ಅದನ್ನು ಅಡಿಬರಹವಾಗಿ ನೀಡಬಹುದು ಎಂದು ನಾಯಕರೊಬ್ಬರು ಸಲಹೆ ನೀಡಿದರು.
ಇದನ್ನೂ ಓದಿ: ಪ್ರತಿಪಕ್ಷಗಳ ಒಕ್ಕೂಟಕ್ಕೆ INDIA ಹೆಸರು ಸಲಹೆ ನೀಡಿದ್ಯಾರು?: ಯಾರು ಯಾವೆಲ್ಲಾ ಹೆಸರು ಸೂಚಿಸಿದ್ದರು?... ಇಲ್ಲಿದೆ ವಿವರ
ಟ್ಯಾಗ್‌ಲೈನ್ ಹಲವಾರು ನಾಯಕರ ಜಂಟಿ ಪ್ರಯತ್ನದ ಫಲಿತಾಂಶವಾಗಿದೆ ಎಂದು ಹಲವಾರು ನಾಯಕರು ಒತ್ತಿ ಹೇಳಿದರು.