ಪಂಜಾಬ್‌ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕ್​ನಿಂದ ಬಂದ ಡ್ರೋಣ್ ವಶಕ್ಕೆ

ಪಂಜಾಬ್‌ ರಾಜ್ಯದ ತರ್ನ್ ತರಣ್ ಜಿಲ್ಲೆಯ ಮಸ್ತಗಢ ಗ್ರಾಮದ ಕೃಷಿ ಭೂಮಿಯಲ್ಲಿ ಪಾಕಿಸ್ತಾನದಿಂದ ಬಂದ ಡ್ರೋಣ್ ನ್ನು ಗಡಿ ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿದೆ.
ಕೆಳಗೆ ಬಿದ್ದಿರುವ ಡ್ರೋಣ್.
ಕೆಳಗೆ ಬಿದ್ದಿರುವ ಡ್ರೋಣ್.

ತರ್ನ್ ತರಣ್ (ಪಂಜಾಬ್): ಪಂಜಾಬ್‌ ರಾಜ್ಯದ ತರ್ನ್ ತರಣ್ ಜಿಲ್ಲೆಯ ಮಸ್ತಗಢ ಗ್ರಾಮದ ಕೃಷಿ ಭೂಮಿಯಲ್ಲಿ ಪಾಕಿಸ್ತಾನದಿಂದ ಬಂದ ಡ್ರೋಣ್ ನ್ನು ಗಡಿ ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿದೆ.

ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಬಿಎಸ್ಎಫ್ ಮತ್ತು ಪಂಜಾಬ್ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ, ಮಸ್ತಗಢ ಗ್ರಾಮದ ಹೊರವಲಯದಲ್ಲಿ ಕಂಡು ಬಂದ ಪಾಕಿಸ್ತಾನದ ಡ್ರೋಣ್ ಅನ್ನು ವಶಪಡಿಸಿಕೊಂಡರು.

ವಶಪಡಿಸಿಕೊಂಡ ಡ್ರೋಣ್ ಕ್ವಾಡ್‌ಕಾಪ್ಟರ್, ಡಿಜೆಐ ಮ್ಯಾಟ್ರಿಸ್ 300 ಆರ್‌ಟಿಕೆ ಮಾಡೆಲ್ ಆಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಂಗಳವಾರ ಕೂಡ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪಂಜಾಬ್‌ನ ತರ್ನ್ ತರಣ್ ಜಿಲ್ಲೆಯ ಅಂತರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನದ ಡ್ರೋಣ್'ನ್ನು ಹೊಡೆದುರುಳಿಸಿತ್ತು. ಈ ವೇಳೆ 2.35 ಕೆಜಿ ಹೆರಾಯಿನ್'ನ್ನು ವಸಕ್ಕೆ ಪಡೆದುಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com