ಮಣಿಪುರ: ಬ್ರಾಡ್‌ಬ್ಯಾಂಡ್ ಮೇಲಿನ ನಿಷೇಧ ತೆರವು; ಮೊಬೈಲ್ ಇಂಟರ್ನೆಟ್ ನಿಷೇಧ ಮುಂದುವರಿಕೆ
ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಸುಮಾರು ಮೂರು ತಿಂಗಳ ನಂತರ ರಾಜ್ಯ ಸರ್ಕಾರ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಮೇಲಿನ ನಿಷೇಧವನ್ನು ಕೆಲವು ಷರತ್ತುಗಳೊಂದಿಗೆ ಮಂಗಳವಾರ ಹಿಂಪಡೆದಿದೆ.
Published: 25th July 2023 07:04 PM | Last Updated: 25th July 2023 07:04 PM | A+A A-

ಮಣಿಪುರ ಹಿಂಸಾಚಾರ
ಇಂಫಾಲ್: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಸುಮಾರು ಮೂರು ತಿಂಗಳ ನಂತರ ರಾಜ್ಯ ಸರ್ಕಾರ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಮೇಲಿನ ನಿಷೇಧವನ್ನು ಕೆಲವು ಷರತ್ತುಗಳೊಂದಿಗೆ ಮಂಗಳವಾರ ಹಿಂಪಡೆದಿದೆ.
ಆದಾಗ್ಯೂ, ಮೊಬೈಲ್ ಇಂಟರ್ನೆಟ್ ಮೇಲಿನ ನಿಷೇಧ ಮುಂದುವರೆಯಲಿದೆ ಎಂದು ಗೃಹ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.
ಇದನ್ನು ಓದಿ: ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ: 7ನೇ ಆರೋಪಿ ಬಂಧನ
ಇಂಟರ್ ನೆಟ್ ಸಂಪರ್ಕವು ಸ್ಥಿರ IP ಮೂಲಕ ಮಾತ್ರ ಇರುತ್ತದೆ ಮತ್ತು ಸಂಬಂಧಿತ ಚಂದಾದಾರರು ಸದ್ಯಕ್ಕೆ ಇತರೆ ಯಾವುದೇ ಹೊಸ ಸಂಪರ್ಕಕ್ಕೂ ಅನುಮತಿ ನೀಡಬಾರದು ಎಂಬ ಷರತ್ತು ವಿಧಿಸಲಾಗಿದೆ.
ಇಂಟರ್ ನೆಟ್ ನಿಷೇಧದಿಂದ ಮೊಬೈಲ್ ರೀಚಾರ್ಜ್, ಎಲ್‌ಪಿಜಿ ಸಿಲಿಂಡರ್ ಬುಕಿಂಗ್, ವಿದ್ಯುತ್ ಬಿಲ್‌ಗಳ ಪಾವತಿ ಮತ್ತು ಇತರ ಆನ್‌ಲೈನ್ ಸೇವೆಗಳಲ್ಲದೆ, ಕಚೇರಿಗಳು ಮತ್ತು ಸಂಸ್ಥೆಗಳು ಮತ್ತು ಮನೆಯಿಂದಲೇ ಕೆಲಸ ಮಾಡುವ ಜನರ ನೋವನ್ನು ಸರ್ಕಾರ ಅರಿತುಕೊಂಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.