
ಬಾಂಬೆ ಐಐಟಿ
ಬಾಂಬೆ: ಬಾಂಬೆ ಐಐಟಿ ಕ್ಯಾಂಟೀನ್ ನಲ್ಲಿ ಆಹಾರ ತಾರಮತ್ಯದ ವಿವಾದ ಭುಗಿಲೆದ್ದಿದೆ.
ಕ್ಯಾಂಟೀನ್ ನ ಗೋಡೆಗಳ ಮೇಲೆ ಸಸ್ಯಹಾರಿಗಳಿಗೆ ಮಾತ್ರ ಎಂಬ ಪೋಸ್ಟರ್ ಗಳನ್ನು ಹಾಕಲಾಗಿದ್ದು, ಇದನ್ನು ವಿದ್ಯಾರ್ಥಿ ಪ್ರತಿನಿಧಿಯೊಬ್ಬರು ತೀವ್ರವಾಗಿ ವಿರೋಧಿಸಿದ್ದಾರೆ.
"ಸಸ್ಯಹಾರಿಗಳಿಗೆ ಮಾತ್ರ ಇಲ್ಲಿ ಕೂರಲು ಅವಕಾಶ" ಎಂದು ಹಾಸ್ಟೆಲ್ 12 ರ ಕ್ಯಾಂಟೀನ್ ನ ಗೋಡೆಗಳ ಮೇಲೆ ಕಳೆದ ವಾರ ಹಾಕಿದ್ದ ಬೋರ್ಡ್ ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ.
ಇದನ್ನೂ ಓದಿ:ಐಐಟಿ ಬಾಂಬೆಗೆ 315 ಕೋಟಿ ರೂ. ದೇಣಿಗೆ ನೀಡಿದ ನಂದನ್ ನಿಲೇಕಣಿ
ವಿವಾದದ ಬೆನ್ನಲ್ಲೆ ಈ ಪೋಸ್ಟರ್ ಪತ್ತೆಯಾಗಿರುವುದನ್ನು ಖಾತ್ರಿಪಡಿಸಿರುವ ಸಂಸ್ಥೆಯ ಅಧಿಕಾರಿಯೊಬ್ಬರು, ಕ್ಯಾಂಟೀನ್ ನಲ್ಲಿ ಈ ಪೋಸ್ಟರ್ ಹೇಗೆ ಬಂತೆಂದು ತಿಳಿದಿಲ್ಲ ಎಂದು ಹೇಳಿದ್ದಾರೆ. ವಿವಿಧ ರೀತಿಯ ಆಹಾರಗಳನ್ನು ಸೇವಿಸುವುದಕ್ಕಾಗಿ ನಿರ್ದಿಷ್ಟ ಆಸನಗಳು ಇಲ್ಲಿಲ್ಲ. ಆದಗ್ಯೂ ಈ ರೀತೀಯ ಪೋಸ್ಟರ್ ಹೇಗೆ ಬಂದಿತೆಂದು ತಿಳಿದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ ನ ವಿದ್ಯಾರ್ಥಿಗಳು ಪೋಸ್ಟರ್ ಗಳನ್ನು ಹರಿದು ಪ್ರತಿಭಟನೆ ನಡೆಸಿದ್ದಾರೆ.
ಹಾಸ್ಟೆಲ್‌ನ ಪ್ರಧಾನ ಕಾರ್ಯದರ್ಶಿಗೆ ಆರ್‌ಟಿಐಗಳು ಮತ್ತು ಇಮೇಲ್‌ಗಳು ಇನ್‌ಸ್ಟಿಟ್ಯೂಟ್‌ನಲ್ಲಿ ಆಹಾರ ಪ್ರತ್ಯೇಕತೆಗೆ ಯಾವುದೇ ನೀತಿಯಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರೂ, ಕೆಲವು ವ್ಯಕ್ತಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಎಎಪಿಎಸ್‌ಸಿ ಹೇಳಿದೆ.