ಜಮ್ಮುವಿನ ಸಾಂಬಾ ಪ್ರದೇಶದಲ್ಲಿ ಪಾಕಿಸ್ತಾನದ ಒಳನುಸುಳುಕೋರನ ಗುಂಡಿಕ್ಕಿ ಹತ್ಯೆಗೈದ ಬಿಎಸ್ಎಫ್

ಪಾಕಿಸ್ತಾನದ ಒಳನುಸುಳುಕೋರನನ್ನು ಗುರುವಾರ ನಸುಕಿನ ಜಾವ ಬಿಎಸ್ ಎಫ್ ಯೋಧರು ಹೊಡೆದುರುಳಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಮ್ಮು-ಕಾಶ್ಮೀರ:ಪಾಕಿಸ್ತಾನದ ಒಳನುಸುಳುಕೋರನನ್ನು ಗುರುವಾರ ನಸುಕಿನ ಜಾವ ಬಿಎಸ್ ಎಫ್ ಯೋಧರು ಹೊಡೆದುರುಳಿಸಿದ್ದಾರೆ. 

ಜಮ್ಮು-ಕಾಶ್ಮೀರದ ಸಾಂಬಾ ಪ್ರದೇಶದಲ್ಲಿ ಇಂದು ಪಾಕಿಸ್ತಾನ ಕಡೆಯಿಂದ ಅಂತಾರಾಷ್ಟ್ರೀಯ ಗಡಿಭಾಗವನ್ನು ನುಸುಳಿ ಶಂಕಾಸ್ಪದ ರೀತಿಯಲ್ಲಿ ವ್ಯಕ್ತಿಯೊಬ್ಬ ಸಂಚರಿಸುತ್ತಿದ್ದ. ಬಿಎಸ್ಎಫ್ ಯೋಧರು ಆತನಿಗೆ ಎಚ್ಚರಿಕೆ ನೀಡಿದರು.

ಆದರೂ ಯೋಧರ ಮಾತನ್ನು ಲಕ್ಷಿಸದೆ ಭಾರತದ ಗಡಿಯೊಳಗೆ ಬೇಲಿ ದಾಟಿ ಮುಂದಕ್ಕೆ ಬರಲಾರಂಭಿಸಿದ. ಆಗ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಯೋಧರು ಆತನನ್ನು ಗುಂಡಿಕ್ಕಿ ಕೊಂದರು. 

ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಜಮ್ಮುವಿನ ಬಿಎಸ್ಎಫ್ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com