
ಸಾಕ್ಷಿ ಹತ್ಯೆ ಘಟನೆಯ ದೃಶ್ಯ (ಸಂಗ್ರಹ ಚಿತ್ರ)
ನವದೆಹಲಿ: ದೆಹಲಿಯಲ್ಲಿ ಇತ್ತೀಚೆಗೆ ನಡೆದಿದ್ದ ಅಪ್ರಾಪ್ತ ಬಾಲಕಿ ಸಾಕ್ಷಿ ಹತ್ಯೆ ಪ್ರಕರಣದಲ್ಲಿ ಶವಪರೀಕ್ಷೆ ವರದಿ ಬಹಿರಂಗವಾಗಿದ್ದು, ಘಟನೆಯ ಭೀಕರತೆಯನ್ನು ತೆರೆದಿಟ್ಟಿದೆ.
ಶಾಬಾದ್ ಡೈರಿ ಪ್ರದೇಶದಲ್ಲಿ ಮೇ.28 ರಂದು ಆರೋಪಿ ಸಾಹಿಲ್ ಎಂಬ ವ್ಯಕ್ತಿ ಸಾಕ್ಷಿ ಎಂಬ ಅಪ್ರಾಪ್ತ ಬಾಲಕಿಯ ಹೊಟ್ಟೆಗೆ 16 ಬಾರಿ ಇರಿದು ಹತ್ಯೆ ಮಾಡಿದ್ದ. ತೀವ್ರವಾಗಿ ಗಾಯಗೊಂಡಿದ್ದ ಸಾಕ್ಷಿಯ ಒಳಾಂಗಗಳು ಹೊಟ್ಟೆ ಭಾಗದಿಂದ ಹೊರಬಂದು ಜೋತಾಡುತ್ತಿದ್ದವು ಎಂಬ ಅಂಶ ಬಹಿರಂಗವಾಗಿದೆ.
ಇದನ್ನೂ ಓದಿ: ಅಪ್ರಾಪ್ತ ವಯಸ್ಸಿನ ಬಾಲಕಿಗೆ 20 ಬಾರಿ ಇರಿದು ಹತ್ಯೆ: ರಾಷ್ಟ್ರ ರಾಜಧಾನಿಯಲ್ಲಿ ಪೈಶಾಚಿಕ ಕೃತ್ಯ, ರಕ್ಕಸ ಪ್ರೇಮಿ ಸೆರೆ
ಪೊಲೀಸರು ಆಸ್ಪತ್ರೆಯಿಂದ 16-17 ಪುಟಗಳಷ್ಟು ಚಾರ್ಜ್ ಶೀಟ್ ನ್ನು ಪಡೆದಿದ್ದು, ಇದರಲ್ಲಿ ಕೊಲೆಯ ಭೀಕರ ವಿವರಗಳನ್ನು ವಿವರಿಸಲಾಗಿದೆ. ಆರೋಪಿ ಸಾಹಿಲ್ ಆಕೆಗೆ ಹಲವು ಬಾರಿ ಇರಿದಿದ್ದಾನೆ ಮತ್ತು ನಂತರ ಆಕೆಯ ತಲೆಯನ್ನು ಕಲ್ಲು ಬಂಡೆಯಿಂದ ಜಜ್ಜಿದ್ದಾನೆ ಎಂದು ವರದಿ ಬಹಿರಂಗಪಡಿಸಿದೆ.
ಸಂತ್ರಸ್ತೆಯ ದೇಹದ ಮೇಲೆ ಹಲವಾರು ಇರಿತದ ಗಾಯಗಳಿದ್ದು ತಲೆ ಪ್ರದೇಶದಲ್ಲಿ ಕೆಲವು ಮೂಳೆಗಳಲ್ಲಿ ಬಿರುಕುಗಳು ಮತ್ತು ಗಾಯಗಳು ಕಂಡುಬಂದಿವೆ.
ದೇಹದಲ್ಲಿರುವ 16 ಇರಿತದ ಗಾಯಗಳ ಪೈಕಿ ಗರಿಷ್ಠ ಗಾಯಗಳು ಸೊಂಟದ ಪ್ರದೇಶದಲ್ಲಿದ್ದು, ದೇಹದ ಹಲವು ಮೂಳೆಗಳು ಮುರಿದಿದ್ದು ಹತ್ಯೆಯ ಭೀಕರತೆಯನ್ನು ತೋರಿಸುತ್ತಿವೆ.