ಒಡಿಶಾ: ಭೀಕರ ಅಪಘಾತ ಸಂಭವಿಸಿದ 51 ಗಂಟೆ ಬಳಿಕ ರೈಲು ಸಂಚಾರ ಪುನರಾರಂಭ

ಮೂರು ರೈಲುಗಳ ನಡುವೆ ಡಿಕ್ಕಿ ಸಂಭವಿಸಿದ್ದರಿಂದ 275 ಜನರು ಮೃತಪಟ್ಟಿದ್ದ ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಾಗ ರೈಲು ನಿಲ್ದಾಣದ ಬಳಿಯ ಹಳಿ ಮೇಲಿನ ಅವಶೇಷಗಳ ತೆರವು ಹಾಗೂ ದುರಸ್ಥಿ  ಕಾರ್ಯ ಪೂರ್ಣಗೊಂಡಿದ್ದು, ಇದೀಗ ರೈಲುಗಳ ಸಂಚಾರ ಪುನಾರಾರಂಭವಾಗಿದೆ.
ರೈಲುಗಳ ಸಂಚಾರ ಪುನರಾರಂಭ
ರೈಲುಗಳ ಸಂಚಾರ ಪುನರಾರಂಭ

ಬಾಲಾಸೋರ್: ಮೂರು ರೈಲುಗಳ ನಡುವೆ ಡಿಕ್ಕಿ ಸಂಭವಿಸಿದ್ದರಿಂದ 275 ಜನರು ಮೃತಪಟ್ಟಿದ್ದ ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಾಗ ರೈಲು ನಿಲ್ದಾಣದ ಬಳಿಯ ಹಳಿ ಮೇಲಿನ ಅವಶೇಷಗಳ ತೆರವು ಹಾಗೂ ದುರಸ್ಥಿ  ಕಾರ್ಯ ಪೂರ್ಣಗೊಂಡಿದ್ದು, ಇದೀಗ ರೈಲುಗಳ ಸಂಚಾರ ಪುನಾರಾರಂಭವಾಗಿದೆ.

ಹಳಿಗಳು ಹಾಳಾಗಿದ್ದರಿಂದ ಸಂಚಾರ ಸ್ಥಗಿತವಾಗಿತ್ತು. ಈ ಹಳಿ ದುರಸ್ಥಿ ಕಾರ್ಯ ಮುಗಿದಿದ್ದು, ಅಪಘಾತ ಸಂಭವಿಸಿದ 51 ಗಂಟೆಗಳ ಬಳಿಕ ರೈಲುಗಳ ಸಂಚಾರ ಎಂದಿನಂತೆ ಸಾಗಿದೆ. ಎರಡು ಟ್ರ್ಯಾಕ್ ಗಳಲ್ಲಿ  ಎಂದಿನಂತೆ ರೈಲುಗಳು ಸಂಚರಿಸುತ್ತೇವೆ ಎಂದು ದುರಂತ ನಡೆದ ಸ್ಥಳದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಸುದ್ದಿಗಾರರಿಗೆ ತಿಳಿಸಿದರು.

ಜೂನ್ 2 ರಂದು ಸಂಜೆ 7 ಗಂಟೆ ಸುಮಾರಿನಲ್ಲಿ ಕೋರಮಂಡಲ್ ಎಕ್ಸ್‌ಪ್ರೆಸ್ ನ ಹೆಚ್ಚಿನ ಬೋಗಿಗಳು ಹಳಿ ತಪ್ಪಿ ನಿಂತಿದ್ದ ಗೂಡ್ಸ್ ರೈಲಿಗೆ ಅಪ್ಪಳಿಸಿತ್ತು. ಅದೇ ಸಮಯದಲ್ಲಿ ಹಾದು ಹೋಗುತ್ತಿದ್ದ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್‌ನ ಕೊನೆಯ ಕೆಲವು ಬೋಗಿಗಳ ಮೇಲೆ ಕೋರಮಂಡಲ್‌ನ ಕೆಲವು ಬೋಗಿಗಳು ಉರುಳಿ ಬಿದ್ದ ಪರಿಣಾಮ ಅಪಾರ ಪ್ರಮಾಣದ ಸಾವು ನೋವು ಉಂಟಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com