ಒಡಿಶಾ ರೈಲು ದುರಂತ: ತನಿಖೆ ಪೂರ್ಣ, ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್‌ನಲ್ಲಿನ ಬದಲಾವಣೆಯೇ ಅಪಘಾತಕ್ಕೆ ಕಾರಣ ಎಂದ ಕೇಂದ್ರ ಸರ್ಕಾರ
ಒಡಿಶಾದ ಬಾಲಸೋರ್ ರೈಲು ಅಪಘಾತ ಪ್ರಕರಣಕ್ಕೆ ಮೂಲಕ ಕಾರಣಗಳ ಪತ್ತೆ ಮಾಡಲಾಗಿದ್ದು, ಅದಕ್ಕೆ ಕಾರಣರಾದವರನ್ನೂ ಗುರ್ತಿಸಲಾಗಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಭಾನುವಾರ ಹೇಳಿದ್ದಾರೆ.
Published: 04th June 2023 10:53 AM | Last Updated: 04th June 2023 10:22 PM | A+A A-

ಕೇಂದ್ರ ರೈಲ್ವೇ ಸಚಿವ
ಬಾಲಸೋರ್ (ಒಡಿಶಾ): ಒಡಿಶಾದ ಬಾಲಸೋರ್ ರೈಲು ಅಪಘಾತ ಪ್ರಕರಣಕ್ಕೆ ಮೂಲಕ ಕಾರಣಗಳ ಪತ್ತೆ ಮಾಡಲಾಗಿದ್ದು, ಅದಕ್ಕೆ ಕಾರಣರಾದವರನ್ನೂ ಗುರ್ತಿಸಲಾಗಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಭಾನುವಾರ ಹೇಳಿದ್ದಾರೆ.
ಅಪಘಾತದ ಸ್ಥಳದಲ್ಲಿ ಖುದ್ದು ಮೇಲ್ವಿಚಾರಣೆ ನಡಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೌರಾ-ಚೆನ್ನೈ ರೈಲು ಮಾರ್ಗದ ದುರಸ್ತಿ ಕಾರ್ಯ ಬುಧವಾರ ಸಂಜೆಯ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು.
ರೈಲ್ವೆ ಸುರಕ್ಷತಾ ಆಯುಕ್ತರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಘಟನೆಗೆ ಕಾರಣ ಮತ್ತು ಅದಕ್ಕೆ ಕಾರಣರಾದವರನ್ನು ಗುರ್ತಿಸಿದ್ದಾರೆ. ತನಿಖಾ ವರದಿ ಬದಿದ್ದು, ಘಟನೆಗೆ ಮೂಲಕ ಕಾರಣ ಹಾಗೂ ಕಾರಣಕರ್ತರನ್ನು ಗುರ್ತಿಸಲಾಗಿದೆ. ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್‌ನಲ್ಲಿನ ಬದಲಾವಣೆಯಿಂದ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ರೈಲು ಮಾರ್ಗಗಳ ಪುನಃಸ್ಥಾಪನೆಯತ್ತ ಗಮನ ಹರಿಸಲಾಗಿದೆ ಮತ್ತು ಬುಧವಾರ ಬೆಳಿಗ್ಗೆ ಈ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ ಎಂದು ಹೇಳಿದರು.
"ಪ್ರಧಾನಿ ಮೋದಿ ಅವರು ನಿನ್ನೆ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ. ಹಳಿಗಳ ಪುನಃಸ್ಥಾಪಿಸುವ ಕೆಲಸಗಳು ನಡೆಯುತ್ತಿವೆ. ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಬುಧವಾರ ಬೆಳಿಗ್ಗೆ ರೈಲು ಮಾರ್ಗದ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದ್ದು, ನಂತರ ಹಳಿಗಳಲ್ಲಿ ರೈಲುಗಳ ಸಂಚಾರ ಪುನರಾರಂಭಗೊಳ್ಳಲಿದೆ ಎಂದು ತಿಳಿಸಿದರು.
ಈ ನಡವೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು, ಅಪಘಾತದಲ್ಲಿ ಮೃತಪಟ್ಟ ಇತರೆ ರಾಜ್ಯದವರಿಗೆ ತಲಾ ರೂ.5 ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ರೂ.1 ಲಕ್ಷ ಘೋಷಣೆ ಮಾಡಿದ್ದಾರೆ.