ಮುಂಬೈ: ನಿರ್ಮಾಣ ಹಂತದ ಸ್ಥಳದಲ್ಲಿ ಕ್ರೇನ್ ಅಪಘಾತ, ಪ್ರಾಣಾಪಾಯದಿಂದ ವ್ಯಕ್ತಿ ಪಾರು
ವಾಣಿಜ್ಯ ನಗರಿ ಮುಂಬೈನ ಚೆಂಬೂರ್‌ನಲ್ಲಿ ಬುಧವಾರ ನಿರ್ಮಾಣ ಹಂತದ ಸ್ಥಳದಲ್ಲಿ ಕ್ರೇನ್‌ನ ಒಂದು ಭಾಗ ಮುರಿದು ಕೆಲವು ಗುಡಿಸಲುಗಳ ಮೇಲೆ ಬಿದ್ದ ನಂತರ 23 ವರ್ಷದ ವ್ಯಕ್ತಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published: 07th June 2023 08:25 PM | Last Updated: 07th June 2023 08:25 PM | A+A A-

ಸಾಂದರ್ಭಿಕ ಚಿತ್ರ
ಮುಂಬೈ: ವಾಣಿಜ್ಯ ನಗರಿ ಮುಂಬೈನ ಚೆಂಬೂರ್‌ನಲ್ಲಿ ಬುಧವಾರ ನಿರ್ಮಾಣ ಹಂತದ ಸ್ಥಳದಲ್ಲಿ ಕ್ರೇನ್‌ನ ಒಂದು ಭಾಗ ಮುರಿದು ಕೆಲವು ಗುಡಿಸಲುಗಳ ಮೇಲೆ ಬಿದ್ದ ನಂತರ 23 ವರ್ಷದ ವ್ಯಕ್ತಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಧ್ಯಾಹ್ನ 3.45 ರ ಸುಮಾರಿಗೆ ವಾಶಿ ನಾಕಾದ ಓಂ ಗಣೇಶ್ ನಗರದಲ್ಲಿರುವ ಡಿಸರ್ವಾ ಕಟ್ಟಡದ ಸ್ಥಳದಲ್ಲಿ ಈ ಘಟನೆ ಸಂಭವಿಸಿದೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ನ ಅಧಿಕಾರಿ ತಿಳಿಸಿದ್ದಾರೆ. ಬಹುಮಹಡಿ ಕಟ್ಟಡದ ಸ್ಥಳದಲ್ಲಿದ್ದ ಸುಮಾರು 150 ಅಡಿ ಉದ್ದದ ಕ್ರೇನ್‌ನ ಒಂದು ಭಾಗವು ಮುರಿದು ಸುತ್ತಮುತ್ತಲಿನ ಎರಡು ಮೂರು ಗುಡಿಸಲುಗಳ ಮೇಲೆ ಬಿದ್ದಿದೆ.
ಘಟನೆಯಲ್ಲಿ ಐದರಿಂದ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಮುಂಬೈ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಸ್ಥಳೀಯರನ್ನು ಉಲ್ಲೇಖಿಸಿದ್ದಾರೆ. ಆದಾಗ್ಯೂ, ಸಣ್ಣಪುಟ್ಟ ಗಾಯಗಳೊಂದಿಗೆ ಒಬ್ಬ ವ್ಯಕ್ತಿ ಮಾತ್ರ ಚಿಕಿತ್ಸೆಗೆ ದಾಖಲಾಗಿರುವುದಾಗಿ ಅಪಘಾತ ಸ್ಥಳಕ್ಕೆ ಸಮೀಪವಿರುವ ಗೋವಂಡಿಯ ಶತಾಬ್ದಿ ಆಸ್ಪತ್ರೆ ಅಧಿಕಾರಿ ತಿಳಿಸಿದ್ದಾರೆ.
ಗಾಯಗೊಂಡ ವ್ಯಕ್ತಿಯನ್ನು ಅಶುತೋಷ್ ಮಿಶ್ರಾ ಎಂದು ಗುರುತಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.