ಆಗ್ರಾ: ಮನೆಯ ಮೇಲ್ಛಾವಣಿ ಬೆಂಕಿ, ಇಬ್ಬರು ಸಹೋದರಿಯರು ಸಜೀವ ದಹನ

ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯ ಮೇಲ್ಛಾವಣಿಗೆ ಬೆಂಕಿ ತಗುಲಿ ಇಬ್ಬರು ಸಹೋದರಿಯರು ಸಜೀವ ದಹನವಾಗಿರುವ ಘಟನೆ ಆಗ್ರಾದ ಗ್ರಾಮವೊಂದರಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆಗ್ರಾ: ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯ ಮೇಲ್ಛಾವಣಿಗೆ ಬೆಂಕಿ ತಗುಲಿ ಇಬ್ಬರು ಸಹೋದರಿಯರು ಸಜೀವ ದಹನವಾಗಿರುವ ಘಟನೆ ಆಗ್ರಾದ ಗ್ರಾಮವೊಂದರಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗ್ರಾ ಜಿಲ್ಲೆಯ ಖೇರಘರ್ ಬ್ಲಾಕ್‌ನ ಕರ್ಹಕಿ ಗ್ರಾಮದ ಇಬ್ಬರು ಬಾಲಕಿಯರಾದ ಕನಕ್(3) ಮತ್ತು ವೀನೇಶ್(5) ಅಗ್ನಿ ಅವಘಡದಲ್ಲಿ ಸಜೀವ ದಹನವಾಗಿದ್ದು, ಅವರ ಆರು ತಿಂಗಳ ಕಿರಿಯ ಸಹೋದರ ಅಲೋಕ್ ನನ್ನು ರಕ್ಷಿಸಲಾಗಿದೆ ಎಂದು ಬಸಾಯಿ ಜಾಗನೇರ್ ಪೊಲೀಸ್ ಠಾಣೆಯ ಅಧಿಕಾರಿ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಮಕ್ಕಳು ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದರು. ಹೊಟ್ಟಿನಿಂದ ಮಾಡಿದ್ದ ಛಾವಣಿಗೆ ಬೆಂಕಿ ಹೊತ್ತಿಕೊಂಡಿದೆ" ಎಂದು ಕುಮಾರ್ ಹೇಳಿದ್ದಾರೆ.

ಬೆಂಕಿ ಹೊತ್ತಿಕೊಂಡಾಗ ಮಕ್ಕಳ ತಂದೆ ಮನೆಯಲ್ಲಿ ಇರಲಿಲ್ಲ, ದಂಪತಿಯ ಇತರ ಇಬ್ಬರು ಮಕ್ಕಳು ಹೊರಗೆ ಆಟವಾಡುತ್ತಿದ್ದರು. ಅವರ ತಾಯಿ ನೆಲ ಮಹಡಿಯಲ್ಲಿದ್ದರು. ಮಕ್ಕಳನ್ನು ರಕ್ಷಿಸುವ ಪ್ರಯತ್ನದಲ್ಲಿ ತಾಯಿಗೂ ಸುಟ್ಟಗಾಯಗಳಾಗಿವೆ ಎಂದು ಕುಮಾರ್ ತಿಳಿಸಿದ್ದಾರೆ.

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ನೆರೆಹೊರೆಯವರು ಸಹಾಯಕ್ಕೆ ಧಾವಿಸಿ ಹೇಗಾದರೂ ಮಾಡಿ 6 ತಿಂಗಳು ಮಗು ಅಲೋಕ್ ನ್ನು ರಕ್ಷಿಸಿದ್ದಾರೆ. ಆದರೆ ಅವರ ಸಹೋದರಿಯರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ಆರು ತಿಂಗಳ ಮಗು ಮತ್ತು ತಾಯಿ ಆಗ್ರಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com