ತಮಿಳುನಾಡು: ಎಸ್‌ಸಿ ಸಮುದಾಯದವರ ಪ್ರವೇಶಕ್ಕೆ ವಿರೋಧ; ದೇವಸ್ಥಾನ ಸೀಲ್ ಮಾಡಿದ ಅಧಿಕಾರಿಗಳು
ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮೇಲ್ಪತಿ ಗ್ರಾಮದ ಧರ್ಮರಾಜ ದ್ರೌಪದಿ ಅಮ್ಮನ್ ದೇವಸ್ಥಾನಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗಳ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳು ಬುಧವಾರ ದೇವಸ್ಥಾನವನ್ನು...
Published: 07th June 2023 08:16 PM | Last Updated: 07th June 2023 08:16 PM | A+A A-

ಮೇಲ್ಪತಿ ಗ್ರಾಮ
ವಿಲ್ಲುಪುರಂ: ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮೇಲ್ಪತಿ ಗ್ರಾಮದ ಧರ್ಮರಾಜ ದ್ರೌಪದಿ ಅಮ್ಮನ್ ದೇವಸ್ಥಾನಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗಳ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳು ಬುಧವಾರ ದೇವಸ್ಥಾನವನ್ನು ಸೀಲ್ ಮಾಡಿದ್ದಾರೆ.
ವಿಲ್ಲುಪುರಂ ಕಂದಾಯ ವಿಭಾಗೀಯ ಅಧಿಕಾರಿ ಎಸ್ ರವಿಚಂದ್ರನ್ ಅವರು ಇತ್ತೀಚೆಗೆ ಪ್ರಬಲ ಜಾತಿಯ ಪ್ರತಿನಿಧಿಗಳು ಮತ್ತು ಎಸ್‌ಸಿ ಸದಸ್ಯರ ನಡುವಿನ ಶಾಂತಿ ಮಾತುಕತೆ ವಿಫಲವಾದ ನಂತರ ದೇವಾಲಯವನ್ನು ಸೀಲ್ ಮಾಡಲು ಆದೇಶಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿ: ಮೇಕೆದಾಟು ಯೋಜನೆ: ತಮಿಳುನಾಡಿನ ಸಹೋದರರ ಮೇಲೆ ಕೋಪವಾಗಲೀ, ದ್ವೇಷವಾಗಲೀ ಇಲ್ಲ; ಡಿಕೆ ಶಿವಕುಮಾರ್
ಎಸ್‌ಸಿ ಜನ ದೇವರ ದರ್ಶನಕ್ಕಾಗಿ ದೇವಸ್ಥಾನ ಪ್ರವೇಶಿಸುವುದನ್ನು ವಿರೋಧಿಸಿ ಮೇಲ್ವರ್ಗದ ಜನ ಪ್ರತಿಭಟನೆ ನಡೆಸಿದ್ದರು. ನಂತರ ದೇವಸ್ಥಾನ ಪ್ರವೇಶಿಸುವ ಹಕ್ಕನ್ನು ನೀಡಬೇಕು ಎಂದು ಎಸ್ ಸಿ ಸಮುದಾಯ ಒತ್ತಾಯಿಸಿತ್ತು.
ಗ್ರಾಮದಲ್ಲಿ ಸೌಹಾರ್ದತೆ ಹದಗೆಡಬಾರದು ಎಂಬ ಕಾರಣಕ್ಕೆ ಜಿಲ್ಲಾಡಳಿತ ಎರಡು ಸಮುದಾಯಗಳ ನಡುವೆ ಶಾಂತಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಯತ್ನಿಸಿತ್ತು.
ಆದಾಗ್ಯೂ, ಮೇಲ್ವರ್ಗದವರು ತಮ್ಮ ನಿಲುವಿನಿಂದ ಹಿಂದೆ ಸರಿಯಲು ನಿರಾಕರಿಸಿದ್ದರಿಂದ ಸಂಧಾನ ವಿಫಲವಾಯಿತು. ಹೀಗಾಗಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವುದನ್ನು ತಡೆಯಲು ದೇವಸ್ಥಾನವನ್ನು ಸೀಲ್ ಮಾಡಲು ಆದೇಶಿಸಲಾಗಿದೆ.