ಗುಜರಾತಿನ ನೂತನ ಪಿಸಿಸಿ ಅಧ್ಯಕ್ಷರಾಗಿ ಶಕ್ತಿಸಿನ್ಹಾ ಗೋಹಿಲ್ ನೇಮಕ, ಬಬಾರಿಯಾಗೆ ಹರಿಯಾಣ, ದೆಹಲಿ ಉಸ್ತುವಾರಿ
ರಾಜ್ಯಸಭಾ ಸಂಸದ ಶಕ್ತಿ ಸಿನ್ಹಾ ಗೋಹಿಲ್ ಅವರನ್ನು ಗುಜರಾತಿನ ನೂತನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಶುಕ್ರವಾರ ನೇಮಿಸಿದೆ
Published: 09th June 2023 10:59 PM | Last Updated: 09th June 2023 11:04 PM | A+A A-

ಶಕ್ತಿ ಸಿನ್ಹಾ ಗೋಹಿಲ್
ನವದೆಹಲಿ: ರಾಜ್ಯಸಭಾ ಸಂಸದ ಶಕ್ತಿ ಸಿನ್ಹಾ ಗೋಹಿಲ್ ಅವರನ್ನು ಗುಜರಾತಿನ ನೂತನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಶುಕ್ರವಾರ ನೇಮಿಸಿದೆ. ಅವರು ಹೊಂದಿದ್ದ ಹರಿಯಾಣ ಮತ್ತು ದೆಹಲಿಯ ಎಐಸಿಸಿ ಉಸ್ತುವಾರಿ ಸ್ಥಾನವನ್ನು ದೀಪಕ್ ಬಬಾರಿಯಾ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇಮಕ ಮಾಡಿರುವುದಾಗಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಗುಜರಾತ್‌ನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ನಂತರ ರಾಜೀನಾಮೆ ನೀಡಿದ್ದ ಜಗದೀಶ್ ಠಾಕೋರ್ ಅವರ ಸ್ಥಾನಕ್ಕೆ ಗೋಹಿಲ್ ನೇಮಕಗೊಂಡಿದ್ದಾರೆ. ನರೇಂದ್ರ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಗೋಹಿಲ್ ಅವರು ಗುಜರಾತ್‌ನ ಮಾಜಿ ವಿರೋಧ ಪಕ್ಷದ ನಾಯಕರಾಗಿದ್ದರು.
Rajya Sabha MP Shaktisinh Gohil appointed as Gujarat Congress president. Lok Sabha MP V Vaithilingam appointed as Puducherry Congress president and Varsha Gaikwad appointed as Mumbai Congress president. pic.twitter.com/Ea6ciB3Xgo
— ANI (@ANI) June 9, 2023
ರಾಹುಲ್ ಗಾಂಧಿಗೆ ಆಪ್ತರಾಗಿರುವ ಗೋಹಿಲ್ ಅವರನ್ನು ನೇಮಕ ಮಾಡುವ ಮೂಲಕ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯದಲ್ಲಿ ಸಂಘಟನೆಯನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ.
ಎರಡೂವರೆ ದಶಕಗಳಿಂದ ಗುಜರಾತ್‌ನಲ್ಲಿ ಕಾಂಗ್ರೆಸ್ ಅಧಿಕಾರದಿಂದ ದೂರ ಉಳಿದಿದೆ. ಈ ಮಧ್ಯೆ ಭಾಯ್ ಜಗತಾಪ್ ಅವರನ್ನು ಬದಲಿಸುವ ಮೂಲಕ ಮುಂಬೈ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ಹೊಸ ಅಧ್ಯಕ್ಷರಾಗಿ ಶಾಸಕ ವರ್ಷಾ ಗಾಯಕ್ವಾಡ್ ಅವರನ್ನು ಕಾಂಗ್ರೆಸ್ ನೇಮಿಸಿದೆ. ಪುದುಚೇರಿ ಪಿಸಿಸಿ ಮುಖ್ಯಸ್ಥರಾಗಿ ಎ ವಿ ಸುಬ್ರಮಣಿಯನ್ ಬದಲಿಗೆ ಸಂಸದ ವೈತಿಲಿಂಗಂ ಅವರನ್ನು ನೇಮಿಸಲಾಗಿದೆ.