
ಮೈತ್ರೇಯನ್ ಬಿಜೆಪಿ ಸೇರ್ಪಡೆ
ನವದೆಹಲಿ: ಕಳೆದ ವರ್ಷ ಎಐಎಡಿಎಂಕೆಯಿಂದ ಉಚ್ಛಾಟಿತರಾಗಿದ್ದ ಮಾಜಿ ರಾಜ್ಯಸಭಾ ಸದಸ್ಯ ವಿ ಮೈತ್ರೇಯನ್ ಅವರು ಶುಕ್ರವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಇಂದು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್ ಮತ್ತು ಸಿ ಟಿ ರವಿ ಅವರ ಸಮ್ಮುಖದಲ್ಲಿ ಮೈತ್ರೇಯನ್ ಅವರು ಕೇಸರಿ ಪಕ್ಷಕ್ಕೆ ಸೇರ್ಪಡೆಯಾದರು.
ಇದನ್ನು ಓದಿ: ಬಿಜೆಪಿ ಪಕ್ಷ ತನ್ನ ಸಿದ್ಧಾಂತದ ಮೇಲೆ ಬಲವಾಗಿ ನಿಂತಿದೆ: ದೆಹಲಿಯಲ್ಲಿ ನೂತನ ಕಚೇರಿಯ ಭೂಮಿ ಪೂಜೆ ಬಳಿಕ ಜೆ ಪಿ ನಡ್ಡಾ ಮಾತು
ಬಳಿಕ ಮಾತನಾಡಿದ ಮೈತ್ರೇಯನ್ ಅವರು, 2024ರ ಲೋಕಸಭೆ ಮತ್ತು 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಮಲ ಅರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎರಡು ದಶಕಗಳ ಹಿಂದೆ ಎಐಎಡಿಎಂಕೆ ಸೇರುವ ಮೊದಲು ಬಿಜೆಪಿಯಲ್ಲಿದ್ದ ಮೈತ್ರೇಯನ್ ಅವರು ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು, ಜಯಲಲಿತಾ ಅವರ ಆಪ್ತ ಸಹಾಯಕ ಎಂದು ಪರಿಗಣಿಸಲಾಗಿತ್ತು.