ತಮಿಳುನಾಡಿನಲ್ಲಿ ಯೋಧನ ಪತ್ನಿಗೆ 40 ಮಂದಿಯಿಂದ ಕಿರುಕುಳ: 2 ಬಂಧನ 

40ಕ್ಕೂ ಹೆಚ್ಚು ಮಂದಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ನಿಂದಿಸಿದ್ದಾರೆ ಎಂದು ಸೇನಾ ಯೋಧನ ಪತ್ನಿಯೊಬ್ಬರು ಆರೋಪಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಆರೋಪಿ ಬಂಧನ (ಸಾಂದರ್ಭಿಕ ಚಿತ್ರ)
ಆರೋಪಿ ಬಂಧನ (ಸಾಂದರ್ಭಿಕ ಚಿತ್ರ)

ತಿರುವಣ್ಣಾಮಲೈ: 40ಕ್ಕೂ ಹೆಚ್ಚು ಮಂದಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ನಿಂದಿಸಿದ್ದಾರೆ ಎಂದು ಸೇನಾ ಯೋಧನ ಪತ್ನಿಯೊಬ್ಬರು ಆರೋಪಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

40 ಕ್ಕೂ ಹೆಚ್ಚು ಮಂದಿ ನನ್ನ ಮೇಲೆ ದಾಳಿ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ 40ಕ್ಕೂ ಹೆಚ್ಚು ಮಂದಿ ತಮ್ಮನ್ನು ತಮ್ಮ ಕುಟುಂಬವನ್ನು ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ ಎಂದು ಮಹಿಳೆ ಹೇಳಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಮದುವೆ ಖುಷಿಯಲ್ಲಿ ಊರಿಗೆ ಬರುತ್ತಿದ್ದ ಯೋಧ ರೈಲಿನಿಂದ ಕಾಲು ಜಾರಿ ಬಿದ್ದು ದುರ್ಮರಣ!
 
ಈ ಬಗ್ಗೆ ಮಾತನಾಡಿರುವ ಯೋಧ ತಮ್ಮ ಪತ್ನಿಯನ್ನು ಅರೆನಗ್ನಗೊಳಿಸಿ ಥಳಿಸಿದ್ದಾರೆ ಎಂದು ಹೇಳಿದ್ದರು. ಯೋಧ ನೀಡಿರುವ ದೂರಿನ ಅಡಿಯಲ್ಲಿ ತಿರುವಣ್ಣಾಮಲೈ ನ ಎಸ್ ಪಿ ಕಾರ್ತಿಕೇಯನ್ ಎಫ್ಐಆರ್ ದಾಖಲಿಸಿದ್ದಾರೆ.

ಇಬ್ಬರು ಆರೋಪಿಗಳಾದ ರಾಮು ಮತ್ತು ಹರಿಪ್ರಸಾದ್ ಅವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ. ಈ ಘಟನೆಯು "ನಾಗರಿಕ ವಿವಾದ"ದ ಪರಿಣಾಮ ಎಂದು ಪ್ರಾಥಮಿಕ ತನಿಖೆ ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com