ಮಿನಿ ಕೂಪರ್ ಕಾರು ಖರೀದಿಸಿದ್ದ ಸಿಪಿಎಂ ಮುಖಂಡ ಅನಿಲ್ ಕುಮಾರ್ ಹುದ್ದೆಯಿಂದ ವಜಾ

ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಅವರ ಸಮ್ಮುಖದಲ್ಲಿ ಗುರುವಾರ ಸಭೆ ನಡೆಸಿದ ಸಿಪಿಎಂ ಎರ್ನಾಕುಲಂ ಜಿಲ್ಲಾ ಸಮಿತಿಯು ಮಿನಿ ಕೂಪರ್ ಕಾರು ಖರೀದಿಸಿದ್ದ ಸಿಐಟಿಯು ಮುಖಂಡ ಪಿ.ಕೆ ಅನಿಲ್‌ಕುಮಾರ್ ಅವರನ್ನು ಎಲ್ಲಾ ಸಂಘಟನಾ ಜವಾಬ್ದಾರಿಗಳಿಂದ ವಜಾಗೊಳಿಸಲು ನಿರ್ಧರಿಸಿದೆ.
ಪಿಕೆ ಅನಿಲ್ ಕುಮಾರ್
ಪಿಕೆ ಅನಿಲ್ ಕುಮಾರ್

ಎರ್ನಾಕುಲಂ(ಕೇರಳ): ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಅವರ ಸಮ್ಮುಖದಲ್ಲಿ ಗುರುವಾರ ಸಭೆ ನಡೆಸಿದ ಸಿಪಿಎಂ ಎರ್ನಾಕುಲಂ ಜಿಲ್ಲಾ ಸಮಿತಿಯು ಮಿನಿ ಕೂಪರ್ ಕಾರು ಖರೀದಿಸಿದ್ದ ಸಿಐಟಿಯು ಮುಖಂಡ ಪಿ.ಕೆ ಅನಿಲ್‌ಕುಮಾರ್ ಅವರನ್ನು ಎಲ್ಲಾ ಸಂಘಟನಾ ಜವಾಬ್ದಾರಿಗಳಿಂದ ವಜಾಗೊಳಿಸಲು ನಿರ್ಧರಿಸಿದೆ. 

ಕೇರಳ ಪೆಟ್ರೋಲಿಯಂ ಮತ್ತು ಗ್ಯಾಸ್ ವರ್ಕರ್ಸ್ ಯೂನಿಯನ್ ನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಿಲ್ ಕುಮಾರ್ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಮಿನಿ ಕೂಪರ್ ಕಾರನ್ನು ಖರೀದಿಸಿ ವಿವಾದಕ್ಕೆ ಸಿಲುಕಿದ್ದರು.

ಸಿಐಟಿಯು ರಾಜ್ಯ ಸಮಿತಿಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಕ್ಕೂಟವು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್‌ಪಿಸಿಎಲ್) ಗಳಲ್ಲಿ ಸುಮಾರು 4,000 ಗುತ್ತಿಗೆ ಕಾರ್ಮಿಕರನ್ನು ಹೊಂದಿದೆ.

ಅನಿಲ್ ಕುಮಾರ್ ಅವರು ಕಾರಿನ ಕೀಯನ್ನು ತೆಗೆದುಕೊಳ್ಳುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಇದರಿಂದ ಟ್ರೇಡ್ ಯೂನಿಯನ್ ನಾಯಕನೊಬ್ಬ ಐಷಾರಾಮಿ ಕಾರು ಖರೀದಿಸುವುದು ಹೇಗೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅವರು ಇನ್ನೂ ಮೂರು ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಐಒಸಿ ಉದ್ಯೋಗಿಯಾಗಿರುವ ತಮ್ಮ ಪತ್ನಿ ವಾಹನ ಖರೀದಿಸಿದ್ದಾರೆ ಎಂದು ಅನಿಲ್ ಕುಮಾರ್ ವಾದಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com