ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಗತ್ತಿನ ಅತಿ ಜನಪ್ರಿಯ ನಾಯಕ ಆಗಿದ್ದು ಹೇಗೆ?
ಸೋಷಿಯಲ್ ಮೀಡಿಯಾ ವೇದಿಕೆ ಟ್ವಿಟ್ಟರ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ 89.5 ಮಿಲಿಯನ್ ಅನುಯಾಯಿಗಳಿದ್ದಾರೆ. ಇತರ ಮಾಧ್ಯಮಗಳಲ್ಲಿಯೂ ಅವರನ್ನು ಫಾಲೋ ಮಾಡುವವರು ಸಾಕಷ್ಟು ಜನರಿದ್ದಾರೆ. ಜಗತ್ತಿನಲ್ಲಿಯೇ ಪ್ರಧಾನಿ ಮೋದಿ ಅತಿ ಜನಪ್ರಿಯ ನಾಯಕ. ಹಾಗಾದರೆ ಅವರ ಇಷ್ಟೊಂದು ಜನಪ್ರಿಯತೆಗೆ ಕಾರಣವೇನು?
Published: 22nd June 2023 11:10 AM | Last Updated: 22nd June 2023 02:47 PM | A+A A-

ವಾಷಿಂಗ್ಟನ್ ನ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್-ಅಮೆರಿಕ ಪ್ರಥಮ ಮಹಿಳೆ ಜಿಲ್ ಬೈಡನ್ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ
ನ್ಯೂಯಾರ್ಕ್: ಸೋಷಿಯಲ್ ಮೀಡಿಯಾ ವೇದಿಕೆ ಟ್ವಿಟ್ಟರ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ 89.5 ಮಿಲಿಯನ್ ಅನುಯಾಯಿಗಳಿದ್ದಾರೆ. ಇತರ ಮಾಧ್ಯಮಗಳಲ್ಲಿಯೂ ಅವರನ್ನು ಫಾಲೋ ಮಾಡುವವರು ಸಾಕಷ್ಟು ಜನರಿದ್ದಾರೆ. ಜಗತ್ತಿನಲ್ಲಿಯೇ ಪ್ರಧಾನಿ ಮೋದಿ ಅತಿ ಜನಪ್ರಿಯ ನಾಯಕ. ಹಾಗಾದರೆ ಅವರ ಇಷ್ಟೊಂದು ಜನಪ್ರಿಯತೆಗೆ ಕಾರಣವೇನು?
ನ್ಯೂಯಾರ್ಕ್ ಟೈಮ್ಸ್ ನಲ್ಲಿ ಬರೆಯುವ ಬರಹಗಾರ ಮುಜಿಬ್ ಮಾಶಲ್ ಅವರ ಪ್ರಕಾರ ಪ್ರಧಾನಿ ಮೋದಿಯವರ ಜನಪ್ರಿಯತೆಗೆ ಕಾರಣ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮ. ಮೋದಿಯವರ ಮನದಾಳದಿಂದ ಬರುವ ಮಾತುಗಳು ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟದವರೆಗೆ ಜನರ ಮನಸ್ಸಿಗೆ ತಟ್ಟುತ್ತಿದೆ.
ಮನ್ ಕಿ ಬಾತ್: ಕೇಂದ್ರ ಸರ್ಕಾರದ ಒಡೆತನದ ಆಕಾಶವಾಣಿಯಲ್ಲಿ ಪ್ರತಿ ತಿಂಗಳ ಕೊನೆಯ ಭಾನುವಾರ ಬಿತ್ತರಗೊಳ್ಳುವ ಮೋದಿಯವರ ಮನದ ಮಾತು ಕಾರ್ಯಕ್ರಮದಲ್ಲಿ ನಮ್ಮ ಸುತ್ತಮುತ್ತ ನಡೆಯುವ ವಿದ್ಯಮಾನಗಳು, ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು, ಬೆಳಕಿಗೆ ಬಾರದೆ ಎಲೆಮರೆ ಕಾಯಿಯಂತೆ ಕೆಲಸ ಮಾಡುವವರ ಬಗ್ಗೆ ಹೇಳುತ್ತಾರೆ, ದೇಶದ ಯಾವುದೋ ಮೂಲೆಯಲ್ಲಿರುವವರಿಗೆ ಫೋನ್ ಕರೆ ಮಾಡಿ ಮಾತನಾಡಿಸುತ್ತಾರೆ.
ಪ್ರಪಂಚದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶದ ಪ್ರಧಾನಿ ಎಂದು ಅಥವಾ ಹಲವು ದೇಶಗಳಿಗೆ ಭೇಟಿ ನೀಡುತ್ತಾರೆ ಎಂದೋ ಮೋದಿಯವರು ಇಷ್ಟೊಂದು ಜನಪ್ರಿಯತೆ ಸಾಧಿಸಿದ್ದಲ್ಲ. ಜನರ ಮೇಲೆ ಅವರು ಬೀರುತ್ತಿರುವ ಪರಿಣಾಮಗಳು, ಭಾರತೀಯರ ಮೇಲೆ ಪ್ರಭಾವಗಳು, ಅವರ ಸರ್ಕಾರದ ಯೋಜನೆಗಳಿಂದ ಜನಪ್ರಿಯವಾಗುತ್ತಿದ್ದಾರೆ.
ಮನ್ ಕಿ ಬಾತ್ ಮೂಲಕ ಪ್ರಧಾನಿ ಮೋದಿ ಮಕ್ಕಳಿಗೆ ಒಬ್ಬ ಉತ್ತಮ ಶಿಕ್ಷಕನಾಗಿ, ಮಾರ್ಗದರ್ಶಕನಾಗಿ, ದೊಡ್ಡವರಿಗೆ ಸ್ನೇಹಿತನಾಗಿ ಜನರಿಗೆ ಹತ್ತಿರವಾಗುತ್ತಿದ್ದಾರೆ. ಈಗಾಗಲೇ ಮನ್ ಕಿ ಬಾತ್ 100 ಕಂತುಗಳನ್ನು ಪೂರೈಸಿದೆ.
ಇದನ್ನೂ ಓದಿ: ಮನ್ ಕಿ ಬಾತ್'ಗೆ 100ರ ಸಂಭ್ರಮ: ಒಗ್ಗಟ್ಟಿನಿಂದ ದೇಶದ ಅಭಿವೃದ್ದಿಯತ್ತ ಸಾಗೋಣ, ನವಭಾರತ ನಿರ್ಮಾಣ ಮಾಡೋಣ: ಪ್ರಧಾನಿ ಮೋದಿ
ಇನ್ನೊಂದೆಡೆ ಮೋದಿಯವರು ಡಿಜಿಟಲ್ ಮಾಧ್ಯಮಗಳನ್ನು ತಮ್ಮ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳನ್ನು ಜನತೆಗೆ ಪರಿಣಾಮಕಾರಿಯಾಗಿ ಮುಟ್ಟಿಸಲು ನೋಡುತ್ತಾರೆ. ದೇಶದ ಮಕ್ಕಳು, ಯುವಜನತೆ, ವಯಸ್ಕರು, ಇಳಿವಯಸ್ಸಿನವರು ಹೀಗೆ ಎಲ್ಲಾ ವಯೋಮಾನದವರನ್ನು ಸಂಪರ್ಕಿಸುವ ರೀತಿಯಲ್ಲಿ ಮಾಧ್ಯಮಗಳ ಮೂಲಕ, ಸೋಷಿಯಲ್ ಮೀಡಿಯಾ ಮೂಲಕ ಪ್ರಧಾನಿ ಮೋದಿಯವರು ಸಂವಹನ, ಸಂದೇಶ ನಡೆಸುತ್ತಿರುತ್ತಾರೆ.