ಮಧ್ಯಪ್ರದೇಶ: ಪಠ್ಯಕ್ರಮದಲ್ಲಿ ವೀರ್ ಸಾವರ್ಕರ್ ಜೀವನ ಚರಿತ್ರೆ ಕಡ್ಡಾಯ
ಮಧ್ಯಪ್ರದೇಶದ ಸ್ಟೇಟ್ ಬೋರ್ಡ್ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಸಂದೇಶದೊಂದಿಗೆ ವೀರ್ ಸಾವರ್ಕರ್ ಅವರ ಜೀವನ ಚರಿತ್ರೆಯನ್ನು ಕಡ್ಡಾಯ ವಿಷಯವಾಗಿ ಸೇರಿಸಲು ಸರ್ಕಾರ ನಿರ್ಧರಿಸಿದೆ ಎಂದು ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಗುರುವಾರ ತಿಳಿಸಿದ್ದಾರೆ.
Published: 29th June 2023 04:55 PM | Last Updated: 29th June 2023 04:59 PM | A+A A-

ವೀರ್ ಸಾವರ್ಕರ್
ಭೋಪಾಲ್: ಮಧ್ಯಪ್ರದೇಶದ ಸ್ಟೇಟ್ ಬೋರ್ಡ್ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಸಂದೇಶದೊಂದಿಗೆ ವೀರ್ ಸಾವರ್ಕರ್ ಅವರ ಜೀವನ ಚರಿತ್ರೆಯನ್ನು ಕಡ್ಡಾಯ ವಿಷಯವಾಗಿ ಸೇರಿಸಲು ಸರ್ಕಾರ ನಿರ್ಧರಿಸಿದೆ ಎಂದು ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಗುರುವಾರ ತಿಳಿಸಿದ್ದಾರೆ.
ಭಗವಾನ್ ಪರಶುರಾಮ್, ಭಗತ್ ಸಿಂಗ್, ಸುಖದೇವ್, ರಾಜಗುರು ಮತ್ತಿತರರ ಜೀವನ ಚರಿತ್ರೆಯನ್ನು ವಿಷಯವಾಗಿ ಸೇರಿಸಲು ನಿರ್ಧರಿಸಿದೆ ಎಂದು ಅವರು ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಭಾರತದ ನಿಜವಾದ ಕ್ರಾಂತಿಕಾರಿಗಳ ಬಗ್ಗೆ ಕಾಂಗ್ರೆಸ್ ಬೋಧಿಸದಿದ್ದು, ದುರಾದೃಷ್ಟಕರವಾದದ್ದು, ಹೊಸ ಪಠ್ಯಕ್ರಮದಲ್ಲಿ ವೀರ್ ಸಾವರ್ಕರ್, ಭಗವದ್ಗೀತಾ ಸಂದೇಶ್, ಭಗವಾನ್ ಪರಶುರಾಮ್, ಭಗತ್ ಸಿಂಗ್, ಸುಖದೇವ್, ರಾಜಗುರು ಮತ್ತಿತರರ ವಿಷಯವನ್ನು ಸೇರಿಸುತ್ತೇವೆ ಎಂದು ಅವರು ತಿಳಿಸಿದರು.
ಅನುಷ್ಠಾನ ಪ್ರಕ್ರಿಯೆಯ ವಿವರಗಳನ್ನು ಇನ್ನೂ ತಿಳಿಸಬೇಕಾಗಿದೆ. ಆದರೆ, ಸಾವರ್ಕರ್ ಅವರ ಜೀವನ ಚರಿತ್ರೆಯನ್ನು ಪಠ್ಯಕ್ರಮಕ್ಕೆ ಸೇರಿಸುವ ನಿರ್ಧಾರದ ಬಗ್ಗೆ ಕಾಂಗ್ರೆಸ್ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಬ್ರಿಟಿಷರ ಕ್ಷಮೆಯಾಚಿಸಿದ ವೀರ್ ಸಾರ್ವಕರ್ ಅವರ ಜೀವನ ಚರಿತ್ರೆಯನ್ನು ಪಠ್ಯಕ್ರಮದಲ್ಲಿ ಸೇರಿಸುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ" ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಹೇಳಿದ್ದಾರೆ.