ಕೇರಳ: ಉದ್ಯೋಗದ ನೆಪದಲ್ಲಿ ಮೈಸೂರಿನ ವೈದ್ಯೆ ಮೇಲೆ ಅತ್ಯಾಚಾರ, ಪುರುಷ ನರ್ಸ್ ಬಂಧನ
ಕೇರಳದ ಕೋಝಿಕೋಡ್ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಮಹಿಳಾ ವೈದ್ಯೆಯೊಬ್ಬರ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ ಪುರುಷ ನರ್ಸ್ ಒಬ್ಬನನ್ನು ಗುರುವಾರ ಬಂಧಿಸಲಾಗಿದೆ.
Published: 02nd March 2023 04:02 PM | Last Updated: 02nd March 2023 07:29 PM | A+A A-

ಸಾಂದರ್ಭಿಕ ಚಿತ್ರ
ತಿರುವನಂತಪುರಂ: ಕೇರಳದ ಕೋಝಿಕೋಡ್ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಮಹಿಳಾ ವೈದ್ಯೆಯೊಬ್ಬರ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ ಪುರುಷ ನರ್ಸ್ ಒಬ್ಬನನ್ನು ಗುರುವಾರ ಬಂಧಿಸಲಾಗಿದೆ.
ಮಹಿಳಾ ವೈದ್ಯರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಸ್ಸೂರ್ ಮೂಲದ ನಿಶಾಮ್ ಬಾಬು ಅವರೊಂದಿಗೆ ಕೆಲಸ ಮಾಡುತ್ತಿದ್ದರು.
ಬಳಿಕ ಆತ ಕೋಯಿಕ್ಕೋಡ್‌ಗೆ ತೆರಳಿದ್ದಾನೆ. ನಂತರ ಆಸ್ಪತ್ರೆಯಲ್ಲಿ ಲಾಭದಾಯಕ ಉದ್ಯೋಗದ ನೆಪದಲ್ಲಿ ವೈದ್ಯೆಯನ್ನು ಅಲ್ಲಿಗೆ ಬರುವಂತೆ ತಿಳಿಸಿದ್ದಾನೆ. ಅವರು ಕೋಯಿಕ್ಕೋಡ್‌ಗೆ ತಲುಪಿದಾಗ ಆತ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ನಂತರ ನಿಶಾಮ್ ಬಾಬು ಮಹಿಳೆಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಆಕೆ ಆತನ ಬೇಡಿಕೆಗಳಿಗೆ ಮಣಿಯಲು ನಿರಾಕರಿಸಿದಾಗ, ಆಕೆಯ ಖಾಸಗಿ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ನಂತರ ಆಕೆ ದೂರು ದಾಖಲಿಸಿದ್ದಾಳೆ.
ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ತೆಗೆದುಕೊಂಡರು.