ವಿದ್ಯಾರ್ಥಿನಿಯರ ಮೇಲೆ ಹಲ್ಲೆ, ಕಿರುಕುಳ ಆರೋಪ: ಪ್ರಾಂಶುಪಾಲರು, ಶಿಕ್ಷಕರು, ಪಾದ್ರಿ, ಸನ್ಯಾಸಿನಿ ವಿರುದ್ಧ ಪ್ರಕರಣ

ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಶಾಲೆಯೊಂದರ ಓರ್ವ ಅರ್ಚಕ, ಕ್ರೈಸ್ತ ಸನ್ಯಾಸಿನಿ ಜೊತೆಗೆ ಶಾಲೆಯ ಪ್ರಾಂಶುಪಾಲರು ಮತ್ತು ಅತಿಥಿ ಶಿಕ್ಷಕರು ಥಳಿಸಿ ಕಿರುಕುಳ ನೀಡಿದ್ದಾರೆ ಎಂದು ಕೆಲವು ವಿದ್ಯಾರ್ಥಿನಿಯರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದಿಂಡೋರಿ: ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಶಾಲೆಯೊಂದರ ಓರ್ವ ಅರ್ಚಕ, ಕ್ರೈಸ್ತ ಸನ್ಯಾಸಿನಿ ಜೊತೆಗೆ ಶಾಲೆಯ ಪ್ರಾಂಶುಪಾಲರು ಮತ್ತು ಅತಿಥಿ ಶಿಕ್ಷಕರು ಥಳಿಸಿ ಕಿರುಕುಳ ನೀಡಿದ್ದಾರೆ ಎಂದು ಕೆಲವು ವಿದ್ಯಾರ್ಥಿನಿಯರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

40 ವರ್ಷದ ಪ್ರಾಂಶುಪಾಲರು ಮತ್ತು 35 ವರ್ಷದ ಅತಿಥಿ ಶಿಕ್ಷಕರ ವಿರುದ್ಧ ಶನಿವಾರ ರಾತ್ರಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಹೆಣ್ಣಿನ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲ),  ಪೊಕ್ಸೊ ಕಾಯಿದೆ ಮತ್ತು ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಡಿಂಡೋರಿ ಪೊಲೀಸ್ ಅಧೀಕ್ಷಕ ಸಂಜಯ್ ಸಿಂಗ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಬಾಲಕಿಯರ ದೂರುಗಳನ್ನು ಕಡೆಗಣಿಸಿದ್ದಕ್ಕಾಗಿ 40 ವರ್ಷದ ಪಾದ್ರಿಯಾಗಿರುವ ಶಾಲೆಯ ಉಸ್ತುವಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಸನ್ಯಾಸಿನಿ (35) ವಿರುದ್ಧ ಬಾಲಕಿಯರನ್ನು ಥಳಿಸಿದ ಆರೋಪ ಹೊರಿಸಲಾಗಿದೆ. ಸದ್ಯಕ್ಕೆ ಪ್ರಾಂಶುಪಾಲರನ್ನು ಮಾತ್ರ ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಜುನ್ವಾನಿಯಲ್ಲಿರುವ ಶಾಲೆಯನ್ನು ರೋಮನ್ ಕ್ಯಾಥೋಲಿಕ್ ಸಮುದಾಯದ ಜಬಲ್ಪುರ್ ಡಯೋಸಿಸನ್ ಎಜುಕೇಶನ್ ಸೊಸೈಟಿ (ಜೆಡಿಇಎಸ್) ನಡೆಸುತ್ತಿದೆ ಎಂದು ಅವರು ಹೇಳಿದರು.

'ಮಧ್ಯ ಪ್ರದೇಶದ ಮಕ್ಕಳ ರಕ್ಷಣಾ ಇಲಾಖೆ ಸದಸ್ಯರು ಹಾಗೂ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ ನಂತರ ಕ್ರಮ ಕೈಗೊಳ್ಳಲಾಗಿದೆ' ಎಂದು ಎಸ್‌ಪಿ ತಿಳಿಸಿದರು.

ಜಬಲ್‌ಪುರ ಆರ್‌ಸಿ ಡಯಾಸಿಸ್ ಬಿಷಪ್ ಜೆರಾಲ್ಡ್ ಅಲ್ಮೇಡಾ ಅವರನ್ನು ಪದೇ ಪದೇ ಪ್ರಯತ್ನಿಸಿದರೂ ಸಂಪರ್ಕಿಸಲಾಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com