ಬೀದಿ ನಾಯಿಗಳನ್ನು 'ಅಸ್ಸಾಂಗೆ ಕಳುಹಿಸಿ, ಅಲ್ಲಿನ ಜನರು ಬಹಳ ಉತ್ಸಾಹದಿಂದ ತಿನ್ನುತ್ತಾರೆ: ಮಹಾರಾಷ್ಟ್ರ ಶಾಸಕ

ಮಹಾರಾಷ್ಟ್ರದ ಬೀದಿ ನಾಯಿಗಳನ್ನು ಅಸ್ಸಾಂಗೆ ಕಳುಹಿಸಬೇಕು. ಅಲ್ಲಿನ ಜನರು ನಾಯಿಗಳನ್ನು ಕೊಂದು ಬಹಳ ಉತ್ಸಾಹದಿಂದ ತಿನ್ನುತ್ತಾರೆ ಎಂದು ಮಹಾರಾಷ್ಟ್ರದ ಶಾಸಕ ಮತ್ತು ಪ್ರಹಾರ್ ಜನಶಕ್ತಿ ಪಕ್ಷದ ಮುಖ್ಯಸ್ಥ ಬಚ್ಚು ಕಾಡು ಹೇಳಿದ್ದು ಈ ಹೇಳಿಕೆ ಇದೀಗ ಕೋಲಾಹಲ ಎಬ್ಬಿಸಿದೆ.
ಬಚ್ಚು ಕಡು
ಬಚ್ಚು ಕಡು

ಮುಂಬೈ: ಮಹಾರಾಷ್ಟ್ರದ ಬೀದಿ ನಾಯಿಗಳನ್ನು ಅಸ್ಸಾಂಗೆ ಕಳುಹಿಸಬೇಕು. ಅಲ್ಲಿನ ಜನರು ನಾಯಿಗಳನ್ನು ಕೊಂದು ಬಹಳ ಉತ್ಸಾಹದಿಂದ ತಿನ್ನುತ್ತಾರೆ ಎಂದು ಮಹಾರಾಷ್ಟ್ರದ ಶಾಸಕ ಮತ್ತು ಪ್ರಹಾರ್ ಜನಶಕ್ತಿ ಪಕ್ಷದ ಮುಖ್ಯಸ್ಥ ಬಚ್ಚು ಕಾಡು ಹೇಳಿದ್ದು ಈ ಹೇಳಿಕೆ ಇದೀಗ ಕೋಲಾಹಲ ಎಬ್ಬಿಸಿದೆ.

ಬೀದಿನಾಯಿಗಳು ಮತ್ತು ಅವುಗಳಿಂದಾಗುವ ಸಮಸ್ಯೆಗಳ ಕುರಿತು ವಿಧಾನಸೌಧದಲ್ಲಿ ಚರ್ಚೆ ನಡೆಯುತ್ತಿತ್ತು. ಇಂತಹ ಸಂದರ್ಭದಲ್ಲಿ ಶಾಸಕ ಬಚ್ಚು ಕಾಡು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಇತರ ಶಾಸಕರಾದ ಪ್ರತಾಪ್ ಸರ್ನಾಯಕ್ ಮತ್ತು ಅತುಲ್ ಭಟ್ಕಳಕರ್ ಅವರು ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಅಸ್ಸಾಂನಲ್ಲಿ ಬೀದಿ ನಾಯಿಗಳಿಗೆ ಭಾರಿ ಬೇಡಿಕೆ ಇದೆ ಎಂದು ಮಹಾರಾಷ್ಟ್ರ ಶಾಸಕ ಬಚ್ಚು ಕಡು ಹೇಳಿದ್ದಾರೆ. ಅಲ್ಲಿ ನಾಯಿಗೆ 8 ಸಾವಿರ ರೂಪಾಯಿ ಬೆಲೆ ಇದೆ. ಇದರೊಂದಿಗೆ ರಾಜ್ಯದಲ್ಲಿನ ಬೀದಿ ನಾಯಿಗಳ ಸಂಖ್ಯೆಯೂ ನಿಯಂತ್ರಣಕ್ಕೆ ಬರಲಿದೆ. ಹೀಗಾಗಿ ನಾಯಿಗಳನ್ನು ಅಸ್ಸಾಂಗೆ ಕಳುಹಿಸಬೇಕು. ಮೊದಲು ಈ ಪ್ರಯೋಗವನ್ನು ನಗರದಲ್ಲಿ ನಡೆಸಬೇಕು ಎಂದರು. 

ಬಚ್ಚು ಕಡು ಹೇಳಿಕೆಗೆ ತೀವ್ರ ಟೀಕೆ ಎದುರಾಗಿದ್ದು ಈ ಹೇಳಿಕೆಯನ್ನು ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಮತ್ತು ಪ್ರಾಣಿ ಪ್ರೇಮಿಗಳು ತೀವ್ರವಾಗಿ ಖಂಡಿಸಿದ್ದಾರೆ. ಶಾಸಕರ ಹೇಳಿಕೆ ತೀರಾ ಅವಹೇಳನಕಾರಿಯಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com