ಬಜೆಟ್ ಗೂ ಮುನ್ನ ಹಣದ ಕೊರತೆ ಎದುರಿಸುತ್ತಿರುವ ಮಹಾರಾಷ್ಟ್ರ ಸರ್ಕಾರಕ್ಕೆ ಒಪಿಎಸ್ ಜಾರಿ ಬೇಡಿಕೆಯ ಒತ್ತಡ 

ರಾಜ್ಯ ಬಜೆಟ್ ಗೂ ಮುನ್ನ ಮಹಾರಾಷ್ಟ್ರದ 2 ಮಿಲಿಯನ್ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಸರ್ಕಾರದ ಮೇಲೆ ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿಗಾಗಿ ಬೇಡಿಕೆ ಮುಂದಿಟ್ಟಿದ್ದಾರೆ.
ಪಿಂಚಣಿ (ಸಾಂಕೇತಿಕ ಚಿತ್ರ)
ಪಿಂಚಣಿ (ಸಾಂಕೇತಿಕ ಚಿತ್ರ)

ಮುಂಬೈ: ರಾಜ್ಯ ಬಜೆಟ್ ಗೂ ಮುನ್ನ ಮಹಾರಾಷ್ಟ್ರದ 2 ಮಿಲಿಯನ್ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಸರ್ಕಾರದ ಮೇಲೆ ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿಗಾಗಿ ಬೇಡಿಕೆ ಮುಂದಿಟ್ಟಿದ್ದಾರೆ.
 
ಆಡಳಿತಾರೂಢ ಶಿವಸೇನೆ-ಬಿಜೆಪಿ ಸಮ್ಮಿಶ್ರ ಸರ್ಕಾರಕ್ಕೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಲವು ನೌಕರರ ಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದು, 2005 ರಲ್ಲಿ ಸ್ಥಗಿತಗೊಳಿಸಲಾದ ಒಪಿಎಸ್ ನ್ನು ಮರುಸ್ಥಾಪಿಸಬೇಕು ಎಂಬ ಆಗ್ರಹ ಮಂಡಿಸಿದ್ದಾರೆ. 
 
ರಾಜಸ್ಥಾನ, ಹಿಮಾಚಲ ಪ್ರದೇಶ, ಜಾರ್ಖಂಡ್, ಚತ್ತೀಸ್ ಗಢ ಹಾಗೂ ಪಂಜಾಬ್ ಗಳಲ್ಲಿ ಒಪಿಎಸ್ ನ್ನು ಮರುಜಾರಿಗೊಳಿಸುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಬೇರೆ ರಾಜ್ಯಗಳಲ್ಲೂ ಇದೇ ಮಾದರಿಯಲ್ಲಿ ಒಪಿಎಸ್ ಮರುಜಾರಿಗೆ ಒತ್ತಾಯ ಕೇಳಿಬಂದಿದೆ.

ರಾಜ್ಯ ಸರ್ಕಾರಿ ಕರ್ಮಚಾರಿ ಮಧ್ಯವರ್ತಿ ಸಂಘಟನೆ (ಆರ್ ಎಸ್ ಕೆಎಂಎಸ್)  ನ ಅಡಿಯಲ್ಲಿ ಸರ್ಕಾರಿ ನೌಕರರ 5 ಡಜನ್ ಗೂ ಹೆಚ್ಚು ಯೂನಿಯನ್ ಗಳು ಸರ್ಕಾರಕ್ಕೆ ಗಡುವು ನೀಡಿದ್ದು, ಬೇಡಿಕೆ ಈಡೇರಿಸದೇ ಇದ್ದಲ್ಲಿ, 2023-24 ಬಜೆಟ್ ನಲ್ಲಿ ಘೋಷಣೆ ಮಾಡದೇ ಇದ್ದಲ್ಲಿ ಮಾ.14 ರಿಂದ ಅನಿರ್ದಿಷ್ಟವಾಧಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. 
 
20 ಜಿಲ್ಲೆಗಳ ಮೂಲಕ ನಾಗ್ಪುರ್- ಮುಂಬೈ ಮಾರ್ಗದಲ್ಲಿ ಕಾಲ್ನಡಿಗೆ ಕೈಗೊಂಡಿದ್ದು,  ಮಹಾರಾಷ್ಟ್ರ ವಿಧಾನಸಭೆಗೆ ತಲುಪಿ ನಂತರ ಮಾ.14 ರಂದು ಪ್ರತಿಭಟನೆಗೆ ಸೇರ್ಪಡೆಯಾಗುವ ಯೋಜನೆಯನ್ನು ಮಹಾರಾಷ್ಟ್ರ ಮಹಾರಾಷ್ಟ್ರ ರಾಜ್ಯ ಕ್ಯಾಸ್ಟ್ರಿಬ್ ಕರ್ಮಚಾರಿ ಕಲ್ಯಾಣ ಮಹಾಸಂಘ ಹೊಂದಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com