ವಲಸಿಗರ ಮೇಲಿನ ದಾಳಿ: ತಮಿಳುನಾಡಿನ ಸರ್ಕಾರದ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ ಬಿಹಾರ ತಂಡ
ವಲಸಿಗ ಕಾರ್ಮಿಕರ ಮೇಲಿನ ದೌರ್ಜನ್ಯದ ವರದಿಯ ಕುರಿತು ತಮಿಳುನಾಡು ಸರ್ಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಬಿಹಾರದ ಅಧಿಕಾರಿಗಳ ನಿಯೋಗ ನಿಟ್ವೇರ್ ಹಬ್ ತಿರುಪುರ್ ಗೆ ಭೇಟಿ ನೀಡಿದ್ದು ಭದ್ರತೆಯ ಕುರಿತು ಪರಿಶೀಲಿಸಿದ್ದಾರೆ.
Published: 06th March 2023 02:55 AM | Last Updated: 06th March 2023 02:47 PM | A+A A-

ಬಿಹಾರ ಅಧಿಕಾರಿಗಳ ತಂಡ (ಸಂಗ್ರಹ ಚಿತ್ರ)
ಚೆನ್ನೈ: ವಲಸಿಗ ಕಾರ್ಮಿಕರ ಮೇಲಿನ ದೌರ್ಜನ್ಯದ ವರದಿಯ ಕುರಿತು ತಮಿಳುನಾಡು ಸರ್ಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಬಿಹಾರದ ಅಧಿಕಾರಿಗಳ ನಿಯೋಗ ನಿಟ್ವೇರ್ ಹಬ್ ತಿರುಪುರ್ ಗೆ ಭೇಟಿ ನೀಡಿದ್ದು ಭದ್ರತೆಯ ಕುರಿತು ಪರಿಶೀಲಿಸಿದ್ದಾರೆ.
ವಲಸಿಗ ಕಾರ್ಮಿಕರ ಮೇಲೆ ದೌರ್ಜನ್ಯ ನಡೆದಿರುವ ಅಂಶವನ್ನೊಳಗೊಂಡ ನಕಲಿ ವೀಡಿಯೋ ವೈರಲ್ ಆಗತೊಡಗಿತ್ತು ಈ ಹಿನ್ನೆಲೆಯಲ್ಲಿ ಬಿಹಾರ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.
ಬಿಹಾರ ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಡಿ ಬಾಲಮುರುಗನ್ ಹಾಗೂ ನಾಲ್ವರು ಸದಸ್ಯರನ್ನೊಳಗೊಂಡ ತಂಡ, ಕಾರ್ಮಿಕರ ಭದ್ರತೆಗಾಗಿ ತಮಿಳುನಾಡು ಸರ್ಕಾರ ಹಾಗೂ ತಿರುಪುರ್ ಜಿಲ್ಲಾ ಆಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದೆ.
ಇದನ್ನೂ ಓದಿ: ವದಂತಿ ಹಬ್ಬಿಸಿದ್ದಕ್ಕೆ ಹಿಂದಿ ದೈನಿಕ ಸಂಪಾದಕರ ವಿರುದ್ಧ ತಮಿಳುನಾಡು ಪೊಲೀಸರಿಂದ ಕೇಸ್!
ಜಿಲ್ಲಾಧಿಕಾರಿಗಳೊಂದಿಗೆ ಹಾಗೂ ಬೇರೆ ರಾಜ್ಯಗಳಿಂದ ಕಾರ್ಮಿಕರನ್ನು ಕರೆತರುವ ಗುತ್ತಿಗೆದಾರರು ಹಾಗೂ ಜವಳಿ ಉದ್ಯಮದ ಪ್ರತಿನಿಧಿಗಳೊಂದಿಗೆ ಬಿಹಾರ ಅಧಿಕಾರಿಗಳ ತಂಡದ ಸದಸ್ಯರು ಚರ್ಚಿಸಿದ್ದಾರೆ.
ಕಾರ್ಮಿಕರೊಂದಿಗೂ ಅಧಿಕಾರಿಗಳು ಚರ್ಚಿಸಿದ್ದು, ಅವರಿಂದಲೂ ಮಾಹಿತಿ ಪಡೆದಿದ್ದಾರೆ.
ತಮಿಳುನಾಡು ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ಸಂತೃಪ್ತರಾಗಿದ್ದೇವೆ, ಭರವಸೆ ಮೂಡಿಸುವ ಈ ಕ್ರಮಗಳಿಂದಾಗಿ ಪರಿಸ್ಥಿತಿ ಪರಿಸ್ಥಿತಿ ಸಹಜವಾಗಿದೆ ಎಂದು ನಿಯೋಗ ಹೇಳಿದೆ.