
ನೌಕಾಪಡೆಯ MRSAM ಪರೀಕ್ಷೆ ಯಶಸ್ವಿ
ನವದೆಹಲಿ: ಶತ್ರುಪಾಳಯದ ನೌಕೆಗಳನ್ನು ಕೆಲವೇ ಸೆಕೆಂಡ್ ಗಳಲ್ಲಿ ಧ್ವಂಸ ಮಾಡಬಲ್ಲ ವಿಧ್ವಂಸಕ ಕ್ಷಿಪಣಿ ವ್ಯವಸ್ಥೆ MRSAM ನ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.
ಭಾರತೀಯ ನೌಕಾಪಡೆಗೆ ಮತ್ತೊಂದು ಯಶಸ್ಸು ಸಿಕ್ಕಿದ್ದು, ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ವಾಯು ಕ್ಷಿಪಣಿ (ಎಂಆರ್‌ಎಸ್‌ಎಎಂ) ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿರುವ ಐಎನ್‌ಎಸ್ ವಿಶಾಖಪಟ್ಟಣ ನೌಕೆಯಿಂದ MRSAM ನ ಪರೀಕ್ಷಾರ್ಥ ಉಡಾವಣೆ ನಡೆಲಾಗಿದ್ದು ಕ್ಷಿಪಣಿ ನಿಗದಿತ ಗುರಿಯನ್ನು ನಿಖರವಾಗಿ ನಿಗದಿತ ಸಮಯದಲ್ಲಿ ತಲುಪುವ ಮೂಲಕ ಯಶಸ್ವಿಯಾಗಿದೆ ಎಂದು ಭಾರತೀಯ ನೌಕಾಪಡೆ ಮೂಲಗಳು ತಿಳಿಸಿವೆ.
ಪರೀಕ್ಷೆಯ ಸಮಯದಲ್ಲಿ, MRSAM ಅತ್ಯಂತ ನಿಖರತೆಯಿಂದ ಗುರಿಯನ್ನು ಮುಟ್ಟಿತು. MRSAM ಅನ್ನು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲಾಗುತ್ತದೆ. ಸ್ವಾವಲಂಬಿ ಭಾರತಕ್ಕೆ ಇದೊಂದು ದೊಡ್ಡ ಹೆಜ್ಜೆ. ಇದನ್ನು BDL ಹೈದರಾಬಾದ್‌ನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರಿ (IAI) ಜಂಟಿಯಾಗಿ ಅಭಿವೃದ್ಧಿಪಡಿಸಿದೆ ಮತ್ತು MRSAM ಅನ್ನು ಸರ್ಕಾರಿ ಸ್ವಾಮ್ಯದ ಭಾರತ್ ಡೈನಾಮಿಕ್ಸ್ ಲಿಮಿಟೆಡ್‌ನಲ್ಲಿ ಉತ್ಪಾದಿಸಲಾಗಿದೆ ಎಂದು ಹೇಳಲಾಗಿದೆ.
ಕ್ಷಿಪಣಿ ನಿರ್ದಿಷ್ಟತೆ
MRSAM ಅನ್ನು ಸೆಪ್ಟೆಂಬರ್ 2021 ರಲ್ಲಿ IAF ಫ್ಲೀಟ್‌ಗೆ ಸೇರಿಸಲಾಯಿತು. ಈ ಕ್ಷಿಪಣಿಯ ವಿಶೇಷತೆ ಏನೆಂದರೆ, 360 ಡಿಗ್ರಿ ಸುತ್ತುವ ಮೂಲಕ ಗಾಳಿಯಲ್ಲಿ ಬರುವ ಬಹು ಗುರಿ ಅಥವಾ ಶತ್ರುಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿ ಗುರಿಯನ್ನು ಛಿದ್ರ ಮಾಡಬಲ್ಲದು. ಈ ಕ್ಷಿಪಣಿಯು 70 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಯಾವುದೇ ಕ್ಷಿಪಣಿ, ಯುದ್ಧ ವಿಮಾನ, ಹೆಲಿಕಾಪ್ಟರ್, ಡ್ರೋನ್, ಕಣ್ಗಾವಲು ವಿಮಾನ, ನೌಕೆ ಮತ್ತು ವೈಮಾನಿಕ ಶತ್ರುಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
#IndianNavy successfully undertook MRSAM firing from #INSVisakhapatnam validating capability to engage Anti Ship Missiles.
— SpokespersonNavy (@indiannavy) March 7, 2023
MRSAM jointly developed by @DRDO_India & #IAI, & produced at #BDL reflects #IndianNavy's commitment to #AatmaNirbharBharat.@DefenceMinIndia @PMOIndia pic.twitter.com/I8LwCV2WWH
ಶತ್ರುಗಳ ಸರಿಯಾದ ಮಾಹಿತಿ ಪಡೆಯಲು ಯುದ್ಧ ನಿರ್ವಹಣಾ ವ್ಯವಸ್ಥೆ, ರಾಡಾರ್ ಸಿಸ್ಟಮ್, ಮೊಬೈಲ್ ಲಾಂಚರ್ ಸಿಸ್ಟಮ್, ಅಡ್ವಾನ್ಸ್ಡ್ ಲಾಂಗ್ ರೇಂಜ್ ರಾಡಾರ್, ರಿಲೋಡರ್ ವೆಹಿಕಲ್ ಮತ್ತು ಫೀಲ್ಡ್ ಸರ್ವಿಸ್ ವೆಹಿಕಲ್ ಇತ್ಯಾದಿಗಳನ್ನು ಇದರಲ್ಲಿ ಸೇರಿಸಲಾಗಿದೆ.