ಮುಂಬೈ ತೀರದಲ್ಲಿ ನೌಕಾಪಡೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ಮೂವರು ಸಿಬ್ಬಂದಿಯ ರಕ್ಷಣೆ

ಭಾರತೀಯ ನೌಕಾಪಡೆಯ ಅತ್ಯಾಧುನಿಕ ಹಗುರ ಹೆಲಿಕಾಪ್ಟರ್ (ALH) ಮೂರು ಸಿಬ್ಬಂದಿಯೊಂದಿಗೆ ಮುಂಬೈ ಕರಾವಳಿಯಲ್ಲಿ ಬುಧವಾರ ತುರ್ತು ಭೂಸ್ಪರ್ಶ ಮಾಡಿದೆ.
ಅತ್ಯಾಧುನಿಕ ಹಗುರ ಹೆಲಿಕಾಪ್ಟರ್ ನ ಚಿತ್ರ
ಅತ್ಯಾಧುನಿಕ ಹಗುರ ಹೆಲಿಕಾಪ್ಟರ್ ನ ಚಿತ್ರ

ಮುಂಬೈ: ಭಾರತೀಯ ನೌಕಾಪಡೆಯ ಅತ್ಯಾಧುನಿಕ ಹಗುರ ಹೆಲಿಕಾಪ್ಟರ್ (ALH) ಮೂರು ಸಿಬ್ಬಂದಿಯೊಂದಿಗೆ ಮುಂಬೈ ಕರಾವಳಿಯಲ್ಲಿ ಬುಧವಾರ ತುರ್ತು ಭೂಸ್ಪರ್ಶ ಮಾಡಿದೆ. ನೌಕಾಪಡೆಯ ಗಸ್ತು ವಿಮಾನದ ಮೂಲಕ ಮೂವರು ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

"ಭಾರತೀಯ ನೌಕಾಪಡೆಯ ಅತ್ಯಾಧುನವಿಕ ಹಗುರ ಹೆಲಿಕಾಪ್ಟರ್ ಮುಂಬೈಯ ತೀರಕ್ಕೆ ಸಮೀಪದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ತಕ್ಷಣದ ಹುಡುಕಾಟ ಮತ್ತು ನೌಕಾ ಗಸ್ತು ನೌಕೆಯ ಮೂಲಕ 3 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com