ಪಿಎಫ್ಐ ಉಗ್ರ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದ ಬಹು ರಾಜ್ಯ ಹವಾಲ ಜಾಲ ಪತ್ತೆ ಮಾಡಿದ ಎನ್ಐಎ
ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದ ಬಹು ರಾಜ್ಯ ಹವಾಲ ಜಾಲವನ್ನು ಎನ್ಐಎ ಪತ್ತೆ ಮಾಡಿದ್ದು, ಕರ್ನಾಟಕ ಹಾಗೂ ಕೇರಳಗಳಲ್ಲಿ ನಿಷೇಧಿತ ಸಂಘಟನೆಯ 5 ಸದಸ್ಯರನ್ನು ಬಂಧಿಸಿದೆ.
Published: 08th March 2023 12:49 AM | Last Updated: 08th March 2023 08:50 PM | A+A A-

ಎನ್ಐಎ
ನವದೆಹಲಿ: ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದ ಬಹು ರಾಜ್ಯ ಹವಾಲ ಜಾಲವನ್ನು ಎನ್ಐಎ ಪತ್ತೆ ಮಾಡಿದ್ದು, ಕರ್ನಾಟಕ ಹಾಗೂ ಕೇರಳಗಳಲ್ಲಿ ನಿಷೇಧಿತ ಸಂಘಟನೆಯ 5 ಸದಸ್ಯರನ್ನು ಬಂಧಿಸಿದೆ.
2022 ರ ಸೆ.27 ರಂದು ಪಿಎಫ್ಐ ನ್ನು ನಿಷೇಧಿಸಿದ್ದರೂ ಪಿಎಫ್ಐ ನಾಯಕರು ಹಾಗೂ ಸದಸ್ಯರು ಉಗ್ರವಾದದ ತಮ್ಮ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದರು ಹಾಗೂ ಅಪರಾಧ ಕೃತ್ಯಗಳನ್ನು ಎಸಗಲು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದ್ದರು ಎಂದು ಏಜೆನ್ಸಿ ಹೇಳಿದೆ.
ಕಾಸರಗೋಡು ಹಾಗೂ ದಕ್ಷಿಣ ಕನ್ನಡದಲ್ಲಿ ಭಾನುವಾರದಿಂದ ಎನ್ಐಎ ತಂಡಗಳು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, 8 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ ಹಲವು ಡಿಜಿಟಲ್ ಉಪಕರಣಗಳು ಹಾಗೂ ಹಲವಾರು ಕೋಟಿ ರೂಪಾಯಿಗಳ ವಹಿವಾಟಿನ ವಿವರಗಳನ್ನು ಹೊಂದಿರುವ ದಾಖಲೆಗಳನ್ನು, ದೋಷಾರೋಪಣೆಗೆ ಯೋಗ್ಯವಾದ ಅಂಶಗಳನ್ನು ಹೊಂದಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಏಜೆನ್ಸಿಯ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ವಿಧ್ವಂಸಕ ಕೃತ್ಯಕ್ಕೆ ಸಂಚು: ಕರ್ನಾಟಕದ ಬಂಟ್ವಾಳದಲ್ಲಿ NIA ದಾಳಿ, ತೀವ್ರ ಶೋಧ
ಕೇರಳದ ಅಬಿದ್ ಕೆಎಂ ಹಾಗೂ ಕರ್ನಾಟಕದ ರಫೀ ಎಂ, ಮೊಹಮ್ಮದ್ ಸೈನಾನ್, ಸರ್ಫರಾಜ್ ನವಾಜ್, ಇಕ್ಬಾಲ್ ಎಂಬ ಪಿಐಎಫ್ ಸಂಘಟನೆಯ ಸದಸ್ಯರನ್ನು ಬಂಧಿಸಲಾಗಿದೆ.