ನಾಗಾಲ್ಯಾಂಡ್ ಸರ್ಕಾರಕ್ಕೆ ಬೆಂಬಲ; ಸ್ಥಳೀಯ ಜೆಡಿಯು ಘಟಕ ವಿಸರ್ಜಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್

ಬಿಜೆಪಿ-ನ್ಯಾಷನಲಿಸ್ಟ್ ಡೆಮಾಕ್ರೆಟಿಕ್ ಪ್ರೋಗ್ರೆಸೀವ್ ಪಕ್ಷಗಳ ನಾಗಾಲ್ಯಾಂಡ್ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲಿಸಿದ್ದಕ್ಕಾಗಿ ಕೆಂಡಾಮಂಡಲರಾಗಿರುವ ಜೆಡಿಯು ನಾಯಕ ನಿತೀಶ್ ಕುಮಾರ್, ಸ್ಥಳೀಯ ಘಟಕವನ್ನು ವಿಸರ್ಜಿಸಿದ್ದಾರೆ. 
ಬಿಹಾರ ಸಿಎಂ ನಿತೀಶ್ ಕುಮಾರ್ (ಸಂಗ್ರಹ ಚಿತ್ರ)
ಬಿಹಾರ ಸಿಎಂ ನಿತೀಶ್ ಕುಮಾರ್ (ಸಂಗ್ರಹ ಚಿತ್ರ)

ನವದೆಹಲಿ: ಬಿಜೆಪಿ-ನ್ಯಾಷನಲಿಸ್ಟ್ ಡೆಮಾಕ್ರೆಟಿಕ್ ಪ್ರೋಗ್ರೆಸೀವ್ ಪಕ್ಷಗಳ ನಾಗಾಲ್ಯಾಂಡ್ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲಿಸಿದ್ದಕ್ಕಾಗಿ ಕೆಂಡಾಮಂಡಲರಾಗಿರುವ ಜೆಡಿಯು ನಾಯಕ ನಿತೀಶ್ ಕುಮಾರ್, ಸ್ಥಳೀಯ ಘಟಕವನ್ನು ವಿಸರ್ಜಿಸಿದ್ದಾರೆ. 

ನಾಗಾಲ್ಯಾಂಡ್ ಜೆಡಿಯು ಕ್ರಮವನ್ನು ತೀವ್ರವಾಗಿ ವಿರೋಧಿಸಿರುವ ನಿತೀಶ್ ಕುಮಾರ್, ಹೆಚ್ಚಿನ ಅಶಿಸ್ತು" ಮತ್ತು "ನಿರಂಕುಶ" ನಡೆ ಎಂದು ಹೇಳಿದ್ದಾರೆ.

ಈಶಾನ್ಯ ರಾಜ್ಯಗಳ ಉಸ್ತುವಾರಿಯಾಗಿರುವ ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಶ್ಫಾಕ್ ಅಹ್ಮದ್ ಖಾನ್, ಪಕ್ಷದ ನಾಗಾಲ್ಯಾಂಡ್ ರಾಜ್ಯದ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ 60 ಸ್ಥಾನಗಳ ಪೈಕಿ ಜೆಡಿಯು ಒಂದು ಸ್ಥಾನವನ್ನು ಗೆದ್ದಿತ್ತು. ನಾಗಾಲ್ಯಾಂಡ್ ನಲ್ಲಿ ಸತತ 2 ನೇ ಬಾರಿಗೆ ಬಿಜೆಪಿ-ಎನ್ ಪಿಪಿ ಸರ್ಕಾರ ರಚಿಸಿದೆ. 

"ನಾಗಾಲ್ಯಾಂಡ್ ನ ಜೆಡಿಯು ಅಧ್ಯಕ್ಷರು ಹೈಕಮಾಂಡ್ ನ್ನು ಸಂಪರ್ಕಿಸದೇ ನಾಗಾಲ್ಯಾಂಡ್ ಸಿಎಂ ಗೆ ಬೆಂಬಲ ಘೋಷಿಸಿರುವ ಪತ್ರವನ್ನು ಪ್ರಕಟಿಸಿದ್ದಾರೆ. ಇದು ಅಶಿಸ್ತಿನ ನಡೆಯಾಗಿದ್ದು, ತಕ್ಷಣವೇ ಜಾರಿಗೆ ಬರುವಂತೆ ನಾಗಾಲ್ಯಾಂಡ್ ರಾಜ್ಯದ ಪಕ್ಷದ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ" ಎಂದು ಜೆಡಿಯು ಪ್ರಕಟಣೆಯಲ್ಲಿ ತಿಳಿಸಿದೆ.  

ಜೆಡಿಯು ನ ಈ ನಡೆ ಬಿಜೆಪಿ ವಿರುದ್ಧ ನಿಲುವು ಹೊಂದಿರುವ ನಿತೀಶ್ ಕುಮಾರ್ ಗೆ ತೀವ್ರ ಮುಜುಗರ ಉಂಟುಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com